ಹೈಕಮಾಂಡ್ ಬೆದರಿಕೆಗೆ ಮಣಿದ್ರಾ ಶಾಸಕ ಉಮೇಶ್ ಕತ್ತಿ?

ಗುರುವಾರ, 29 ಆಗಸ್ಟ್ 2019 (10:51 IST)
ಬೆಂಗಳೂರು : ಬಿಜೆಪಿಯ ಅಸಮಾ‍ಧಾನಿತ ಶಾಸಕ ಉಮೇಶ್ ಕತ್ತಿ ಅವರು ಇದೀಗ ಹೈಕಮಾಂಡ್ ಬೆದರಿಕೆಗೆ ಮಣಿದು ತಣ್ಣಗಾಗಿದ್ದಾರೆ ಎನ್ನಲಾಗಿದೆ.




ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನ ಸಿಗದ ಹಿನ್ನಲೆ ಬಾರೀ ಅಸಮಾಧಾನಗೊಂಡಿದ್ದ ಶಾಸಕ ಉಮೇಶ್ ಕತ್ತಿ ಪಕ್ಷ ಹಾಗೂ ಹೈಕಮಾಂಡ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿ ಕಿಡಿಕಾರಿದ್ದರು. ಆದರೆ ಉಚ್ಚಾಟನೆಯ ಮಾತು ಕೇಳಿ ಬಂದ ಹಿನ್ನಲೆಯಲ್ಲಿ ಇದೀಗ ಉಮೇಶ್ ಕತ್ತಿ ತಣ್ಣಗಾಗಿದ್ದಾರೆ ಎನ್ನಲಾಗಿದೆ.


ಇದೀಗ ಮಾಧ್ಯಮದವರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ನನಗೆ ಯಾವುದೇ ಸ್ಥಾನಮಾನ ಬೇಕಾಗಿಲ್ಲ. ಬಿಜೆಪಿಯಲ್ಲಿ ಶಾಸಕನಾಗಿಯೇ ಮುಂದುವರಿಯಲು ತೀರ್ಮಾನಿಸಿದ್ದೇನೆ. ಇದರ ಹೊರತಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ