ಮಳೆಯ ಕಾರಣ ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ..!!!

ಸೋಮವಾರ, 5 ಸೆಪ್ಟಂಬರ್ 2022 (14:17 IST)
ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್​ನಿಂದಾಗಿ ಸರ್ಜಾಪುರ, ಮಾರತಹಳ್ಳಿ ಭಾಗದ ಭಾಗಶಃ ಐಟಿ ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆಗೆ ಬೆಂಗಳೂರು-ತುಮಕೂರು ಸರ್ವಿಸ್ ರಸ್ತೆ ಜಲಾವೃತವಾಗಿದ್ದು, ಸರ್ವಿಸ್​ ರಸ್ತೆ ಜಲಾವೃತಗೊಂಡ ಪರಿಣಾಮ ಟ್ರಾಫಿಕ್​ಜಾಮ್ ಉಂಟಾಗಿದ್ದು,​​​​​​ ತುಮಕೂರು-ಬೆಂಗಳೂರು ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತ್ತಾಗಿದೆ. ನೆಲಮಂಗಲದ ಶಾಲೆಗೂ ಮಳೆ ನೀರು ನುಗ್ಗಿದ್ದು, ಶಾಲೆಯ ಕಾಂಪೌಂಡ್​ಗೆ ಹಾನಿಯಾಗಿದ್ದು, ಕೊಠಡಿಗಳಿಗೂ ನೀರು ನುಗ್ಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ವಾಜರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು, ಪ್ರಾಥಮಿಕ ಶಾಲಾ ಕೊಠಡಿಯಲ್ಲಿದ್ದ ಕಲಿಕಾ ಸಾಮಾಗ್ರಿ ಹಾನಿಯಾಗಿವೆ. ಸರ್ಕಾರಿ ಶಾಲೆಯಿಂದ ನೀರು ಹೊರಹಾಕಲು ಹರಸಾಹಸ ಪಡುವಂತ್ತಾಗಿದೆ
 
ಮಳೆ ಹಾನಿಯಿಂದಾಗಿ ಐಟಿಬಿಟಿಯವರು ಸಿಎಂಗೆ ಪತ್ರ ಬರೆದ ವಿಚಾರವಾಗಿ ನಗದರಲ್ಲಿ ಮಾಧ್ಯಮದವರೊಂದಿಗೆ ಡಾ.ಸಿ ಎನ್ ಅಶ್ವಥ್ ನಾರಯಣ್ ಮಾತನಾಡಿದ್ದು, ನೆರೆ ಯಾವ ದೇಶಕ್ಕೂ ಯಾವ ರಾಜಧಾನಿಗೂ ತಪ್ಪಿಲ್ಲ. ಎಲ್ಲಾ ದೊಡ್ಡ ದೊಡ್ಡ ನಗರಗಳಲ್ಲಿ ನೆರೆಯ ಸಮಸ್ಯೆಯಾಗಿದೆ. ಈ ದಿಕ್ಕಿನಲ್ಲಿ 50 ವರ್ಷದಲ್ಲಿ ಇಂಥಹ ಮಳೆ ಕಂಡಿಲ್ಲ. ಈ ಸಲ ಬೇಸಿಗೆ ಕೂಡ ಕಾಣಲಿಲ್ಲ. ನೀರು ಹಿಂಗಲು ಅವಕಾಶವಾಗ್ತಿಲ್ಲ. ನಮ್ಮ ಮುಖ್ಯಮಂತ್ರಿಗಳು ನೀರಾವರಿ ಸಚಿವರಾಗಿ ಕೆಲಸ ಮಾಡಿದ್ರು. ಕೆರೆ ನೀರನ್ನ ಮಳೆ ನೀರನ್ನು ಒಟ್ಟಿಗೆ ಸೇರ್ತಿದೆ. ಸ್ಲ್ಯೀವ್ ಗ್ಯಾಟ್ ಹಾಕಿ ವಾಟರ್ ಲೆವಲ್ ಮೈಂಟೇನ್ ಮಾಡಲಾಗಿತ್ತು. ಏನ್ ಕ್ರಮ ವಹಿಸಬೇಕಾಗಿದೆಯೋ ಅದನ್ನ ಮಾಡುತ್ರಿದ್ದೇವೆ. SWM ಅದನ್ನೆಲ್ಲ ಸರಿಯಾಗಿ ಕೆಲಸ ಆಗುವಂತೆ ಮಾಡುತ್ತಿದ್ದೇವೆ. ಒತ್ತುವರಿ ತೆರುವುಗೊಳಿಸಲಾಗುತ್ತಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ