ಊಟ ಕೊಡಲು ಬಂದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಜಮಾಅತ್ ಅಧ್ಯಕ್ಷ

ಮಂಗಳವಾರ, 18 ಫೆಬ್ರವರಿ 2020 (07:00 IST)
ಮಡಿಕೇರಿ : ಊಟ ಕೊಡಲು ಬಂದ ಮಹಿಳೆಯ ಮೇಲೆ ಜಮಾಅತ್ ಅಧ್ಯಕ್ಷ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೊಡಗು ಜಿಲ್ಲೆಯ ಮಟಿಕೇರಿ ತಾಲೂಕಿನ ಎಮ್ಮೆಮಾಡುವಿನಲ್ಲಿ ನಡೆದಿದೆ.


ಜಮಾಅತ್ ಅಧ್ಯಕ್ಷ ಖಾದರ್ ಹಾಜಿ ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಈತ ತನ್ನ ಮನೆಯಲ್ಲಿ ಬಾಡಿಗೆಗೆ ಇರುವ ಮಹಿಳೆ ಊಟ ಕೊಡಲು ಬಂದಾಗ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಕಂಡು ಆಕೆಯ ಮೇಲೆ ಯತ್ನಿಸಿದ್ದಾನೆ. ಆಗ ಆಕೆ ಆತನಿಂದ ತಪ್ಪಿಸಿಕೊಂಡಿದ್ದಾಳೆ. ಅಲ್ಲದೇ ಈ ವಿಷಯ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.


ಆದರೆ ಇದಕ್ಕೆ ಹೆದರದ ಮಹಿಳೆ ಜಮಾಅತ್ ಗೆ ತಿಳಿಸಿದ್ದಾಳೆ. ಆದರೆ ಅವರು ಈ ಬಗ್ಗೆ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಖಾದರ್ ನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ