ಸಾಂಪ್ರದಾಯಗಳನ್ನು ಅದ್ದೂರಿಯಾಗಿ ಪಾಲನೆ ಮಾಡಲಾಗುತ್ತೆ. ಜಂಬೂಸವಾರಿಗೆ ದಿನಗಣನೆ ಶುರುವಾದ ಹಿನ್ನೆಲೆ ಅರಮನೆಯಲ್ಲಿ ಅರಮನೆ ಅಂಬಾರಿ ಆನೆಗಳಿಗೆ ಪುಷ್ಪಾರ್ಚನೆ ರಿಹರ್ಸಲ್ ನಡೆಸಿದ್ರು. ಕಳೆದ ಮೂರು ದಿನಗಳಿಂದ ತಾಲೀಮು ನಡೆಸಲಾಗಿದೆ. ರಾಷ್ಟ್ರೀಯ ವಂದನ ಶಾಸ್ತ್ರ ನ್ಯಾಷನಲ್ ಸೆಲ್ಯೂಟ್ ಪರೇಡ್ ಮಾಡಲಾಗುತ್ತೆ. ನಂತ್ರ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತೆ. ಕೆಎಸ್‌ಆರ್‌ಪಿ, ಹೋಮ್ ಗಾರ್ಡ್, ಆರ್‌ಪಿಎಫ್, ಡಿಆರ್, ಸಿಎಆರ್, ಅಶ್ವಾರೋಹಿದಳದವ್ರಿಂದ ಅಂತಿಮ ಹಂತದ ತಾಲೀಮು ನಡೆಯುತ್ತಿದೆ.
ಇನ್ನು ಇತ್ತ ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಣೆಗೆ ಬೃಹತ್ ಪೆಂಡಾಲ್ ಹಾಗೂ ಕುರ್ಚಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಗೋಲ್ಡ್ ಪಾಸ್ ಹೊಂದಿರುವವರಿಗೆ ಹಾಗೂ ವಿವಿಐಪಿಗಳಿಗೆ ವಿಶೇಷ ಆಸನದ ವ್ಯವಸ್ಥೆ ಇರಲಿದೆ. 5000 ಕೊಟ್ಟು ಗೋಲ್ಡ್ ಪಾಸ್ ಪಡೆದವರು ಮಾತ್ರ ಅರಮನೆ ಆವರಣದಲ್ಲಿ ಅಂಬಾರಿ ವೀಕ್ಷಿಸಬಹುದಾಗಿದೆ. ಇನ್ನು ವಿಜಯದಶಮಿ ದಿನದ ಬೆಳಗ್ಗೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಅರಮನೆಗೆ ಬೆಳ್ಳಿರಥದಲ್ಲಿ ಕಳುಹಿಸಲಾಗುತ್ತದೆ. ಬೆಳಗ್ಗೆ ದೇವಿಗೆ ವಿಶೇಷ ಅಭಿಷೇಕ ಹಾಗೂ ಪ್ರಾರ್ಥನೆಯನ್ನು ಮಾಡಿ ಅರಮನೆಗೆ ಕಳುಹಿಸಲಾಗುತ್ತದೆ ಅಂತ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದ್ರು.