ಜನಾರ್ಧನ ರೆಡ್ಡಿ ಬಂಧನ ಭೀತಿ

ಬುಧವಾರ, 7 ನವೆಂಬರ್ 2018 (16:12 IST)
ಮಾಜಿ ಸಚಿವ ಹಾಗೂ ಗಣಿಧಣಿ ಗಾಲಿ ಜನಾರ್ಧನ ರೆಡ್ಡಿಗೆ ಬಂಧನ ಭೀತಿ ಎದುರಾಗಿದೆ.
ಬಂಧನ ಭೀತಿ ಎದುರಿಸುತ್ತಿರುವ ರೆಡ್ಡಿ, ನಿರೀಕ್ಷಣಾ ಜಾಮೀನಿಗಾಗಿ ಹೈದರಾಬಾದ್ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ.

ಸಾರ್ವಜನಿಕರಿಗೆ ನೂರಾರು ಕೋಟಿ ರೂ. ವಂಚಿಸಿರುವ ಅಂಬಿಡೆಂಟ್ ಸಂಸ್ಥೆಯ ಜತೆ ಅಮಾನ್ಯಗೊಂಡ ನೋಟುಗಳ ಅಕ್ರಮ ಬದಲಾವಣೆಗಾಗಿ ಬಳ್ಳಾರಿಯರಾಜ್ಮಹಲ್ ಆಭರಣ ಅಂಗಡಿಗಳ ಜತೆ 57 ಕೆಜಿ ಚಿನ್ನದ ಗಟ್ಟಿ ಖರೀದಿಸಿದಂತೆ ನಕಲಿ ಬಿಲ್ ಸೃಷ್ಟಿ ಮಾಡಿ, ಆ ಅಂಗಡಿ ಬೆಂಗಳೂರಿನ ಅಂಬಿಕಾ ಆಭರಣ ಮಳಿಗೆಯಿಂದ 18.5 ಕೋಟಿ ರೂ. ವರ್ಗಾವಣೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಿಸಿಬಿ ಪೊಲೀಸರು ಬಂಧನಕ್ಕೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಜನಾರ್ಧನ ರೆಡ್ಡಿ ಪರಾರಿಯಾಗಿದ್ದಾರೆ. ಹೈದರಾಬಾದ್ ನಲ್ಲಿ ತಲೆಮರೆಸಿಕೊಂಡಿರುವ ಜನಾರ್ಧನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ಅಗತ್ಯ ಸಿದ್ಧತೆ ನಡೆಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ