ಈದ್ಗಾ ಮೈದಾನ ವಿಚಾರಕ್ಕಾಗಿ ಮುಂದುವರೆದೆ ಜಟಾಪಟಿ
ಈದ್ಗಾ ಮೈದಾನ ವಿಚಾರಕ್ಕಾಗಿ ಜಟಾಪಟಿ ಮುಂದುವರೆದಿದೆ. ಚಾಮರಾಜಪೇಟೆ ಇದ್ದಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿಶ್ವ ಯೋಗಾ ದಿನಾಚರಣೆಯನ್ನು ಆಚರಿಸಲು ಅನುಮತಿ ನೀಡುವಂತೆ ಬಿಬಿಎಂಪಿಗೆ ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಆದರೆ ಮನವಿಗೆ ಬಿಬಿಎಂಪಿ ಅನುಮತಿ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಮೈದಾನದಲ್ಲಿ ಆಚರಣೆಗೆ ಅವಕಾಶ ನೀಡುವುದಕ್ಕೆ ಗಡುವು ನೀಡಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಯೊಳಗೆ ಅನುಮತಿಯನ್ನ ಕೊಡಬೇಕು ಅಂತ ಆಗ್ರಹಿಸಿದ್ದಾರೆ. ನೀವೆನಾದ್ರು ಅನುಮತಿಯನ್ನ ನೀಡಿಲ್ಲ ಅಂದ್ರೆ ಕೋರ್ಟ್ ನಲ್ಲಿ ಅನುಮತಿಯನ್ನು ಪಡೆಯುತ್ತೇವೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಹಿಂದೂಪರ ಸಂಘಟನೆಗಳು ಈಗಾಗಲೆ ಡೆಡ್ ಲೈನ್ ನೀಡಿವೆ ಆದರೂ ಕೂಡಾ ಅನುಮತಿ ಸಿಗೋದು ಕಷ್ಟ ಎನ್ನಲಾಗುತ್ತಿದೆ.