ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆ

ಗುರುವಾರ, 27 ಏಪ್ರಿಲ್ 2023 (19:40 IST)
ಕುಮಾರಸ್ವಾಮಿ ಆಪ್ತರಿಗೆ ಡಿಕೆ ಬ್ರದರ್ಸ್ ಗಾಳ ಹಾಕುತ್ತಿದ್ದಾರೆ.ಈಗಾಗಲೇ ಹಲವು ನಾಯಕರನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದು ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಲು  ಪ್ರಭಾಕರ್ ರೆಡ್ಡಿ ಬಯಿಸಿದ್ರು.ಆದರೆ ಜೆಡಿಎಸ್ ಪಕ್ಷ  ಸುಷ್ಮಾ ರಾಜಗೋಪಾಲ್ ರೆಡ್ಡಿಗೆ ಟಿಕೇಟ್ ನೀಡಿತು ಈದರಿಂದ ಬೇಸರಗೊಂಡು ಕೈ ಪಾಳ್ಯ ಸೇರ್ಪಡೆ ಆದರು.ಇನ್ನೂ ಕನಕಪುರದ ಕಳೆದ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ ಕೂಡ ಕಾಂಗ್ರೆಸ್ ಸೇರ್ಪಡೆ ಆದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಪಕ್ಷದ ಭಾವುಟಕೊಟ್ಟು ಪಕ್ಷಕ್ಕೆ ಸ್ವಾಗತ ಮಾಡಿಕೊಂಡರು.ಈ ವೇಳೆ ಡಿಕೆಶಿವಕುಮಾರ್ ಮಾತನಾಡಿ ಪ್ರಧಾನಿ‌ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ ಡಿ.ಕೆ.ಶಿವಕುಮಾರ್ ಮೋದಿ ಹತಾಶರಾಗಿದ್ದಾರೆ.ಮೋದಿ ಆತಂಕ ಪಡೋ ಅಗತ್ಯವಿಲ್ಲ.ಹೇಗಿದ್ದರೂ ಅವರ ಸರ್ಕಾರ ಬರೋದಿಲ್ಲ.ಈಗಾಗಲೇ ಅಮಿತ್ ಶಾ ಕೂಡ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದೇ ಹೇಳಿದ್ದಾರೆ.ಅವರು ನಮ್ಮ ಗ್ಯಾರಂಟಿ ಗಳ ಬಗ್ಗೆ ಆತಂಕ ಪಡುವುದು ಬೇಡ.ಅವರು ಕೊಟ್ಟ ಭರವಸೆಗಳನ್ನು ಯಾವುದನ್ನೂ ಈಡೇರಿಸಿಲ್ಲ.ನಮ್ಮ ಸರ್ಕಾರ ಬಂದ ಮೇಲೆ ಗ್ಯಾರಂಟಿ ಈಡೇರಿಸುತ್ತೇವೆ ಇಲ್ಲದೇ ಹೋದರೆ ನಾವು ಮುಂದೆ ನಾವು ಓಟೇ ಕೇಳಲ್ಲ ಎಂದು ಪ್ರಧಾನಿ ಮೋದಿ ಅವರಿಗೆ ತಿರಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ