ಬಂಡಾಯ ಶಾಸಕರ ಶಾಸಕತ್ವ ಅನರ್ಹತೆ ಕೋರಿ ದೂರು

ಶನಿವಾರ, 23 ಜುಲೈ 2016 (12:58 IST)
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪಕ್ಷೇತರ ನಿಷೇಧ ಕಾಯ್ದೆ ಅಡಿಯಲ್ಲಿ ಜೆಡಿಎಸ್‌ ಪಕ್ಷದ 8 ಬಂಡಾಯ ಶಾಸಕರ ಶಾಸಕತ್ವರನ್ನು ರದ್ದು ಪಡಿಸುವಂತೆ ಕೋರಿ ಚಿಕ್ಕಮಗಳೂರು ಜಿಲ್ಲೆಯ ಮೂಡಗೇರೆ ಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಮಂಜುನಾಥ ಅವರು ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರಿಗೆ ದೂರು ಸಲ್ಲಿಸಿದ್ದರು.
 
ಜೆಡಿಎಸ್ ಪಕ್ಷದ ಎಂಟು ಜನ ಬಂಡಾಯ ಶಾಸಕರ ಶಾಸಕತ್ವಯನ್ನು ರದ್ದುಗೊಳಿಸುವಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಗೆರೆ ಕ್ಷೇತ್ರದ ಶಾಸಕ ಬಿ.ಬಿ.ನಿಂಗಯ್ಯ ತಮ್ಮ ವಕೀಲರೊಂದಿಗೆ ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರಿಗೆ ದೂರು ನೀಡಿದ್ದಾರೆ. 
 
ಜೆಡಿಎಸ್‌ನ ಜಮೀರ್ ಅಹ್ಮದ ಹಾಗೂ ಚೆಲುವರಾಯಸ್ವಾಮಿ ಸೇರಿದಂತೆ ಎಂಟು ಬಂಡಾಯ ಶಾಸಕರ ಶಾಸಕತ್ವವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಮನವಿಯನ್ನು ಇಂದು ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ವಿಚಾರಣೆಗೆ ತೆಗೆದುಕೊಂಡಿದ್ದಾರೆ.
 
ಜೆಡಿಎಸ್‌ನ ಜಮೀರ್ ಅಹ್ಮದ ಹಾಗೂ ಚೆಲುವರಾಯಸ್ವಾಮಿ ಸೇರಿದಂತೆ ಎಂಟು ಬಂಡಾಯ ಶಾಸಕರ ಅಡ್ಡಮತದಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಬಿ.ನಿಂಗಯ್ಯ ಹಾಗೂ ಮಂಜುನಾಥ ಅವರು ನೀಡಿರುವ ದಾಖಲೆಗಳನ್ನು ಪರಿಶೀಲಿಸಿ. ನನಗೆ ಸಮ್ಮತಿ ಎನಿಸಿದರೆ 8 ಶಾಸಕರಿಗೆ ನೋಟಿಸ್‌ ನೀಡುತ್ತೇನೆ. ಈ ಕುರಿತು ಅಗಸ್ಟ್ 23 ರಂದು ಮತ್ತೆ ವಿಚಾರಣೆ ನಡೆಸುತ್ತೇನೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ್ ತಿಳಿಸಿದರು.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ