ಶಾಸಕ ಸ್ಥಾನದಿಂದ ಅಂಬರೀಷ್ ವಜಾಕ್ಕೆ ಮನವಿ
ಶಾಸಕ ಸ್ಥಾನದಿಂದ ಅಂಬರೀಷ್ ಅವರನ್ನ ವಜಾಗೊಳಿಸಬೇಕೆಂದು ಕೋರಿ ಮಂಡ್ಯದ ಜಿಲ್ಲಾ ಜೆಡಿಯು ಅಧ್ಯಕ್ಷ ಬಿ.ಎಸ್. ಗೌಡ ಎಂಬುವವರು ಸ್ಪೀಕರ್ ಕೆ.ಬಿ. ಕೋಳಿವಾಡಗೆ ಮನವಿ ಸಲ್ಲಿಸಿದ್ದಾರೆ.
ಸಚಿವ ಸ್ಥಾನದಿಂದ ತೆಗೆದು ಹಾಕಿದ ಬಳಿಕ ಅಂಬರೀಷ್ ಕಾಂಗ್ರೆಸ್`ನ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಇತ್ತೀಚೆಗೆ ನಡೆದ ಉಪಚುನಾವಣಾ ಪ್ರಚಾರ ಕಣದಿಂದಲೂ ಅಂಬರೀಷ್ ದೂರವೇ ಉಳಿದಿದ್ದರು. ಕಾವೇರಿ ಹೋರಾಟದಲ್ಲಿ ಮಂಡ್ಯ ರೈತರ ಪರ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಅಸಮಾಧಾನವೂ ವ್ಯಕ್ತವಾಗಿತ್ತು.