ಯಲಹಂಕದ ಅಟ್ಟೂರು ಲೇಔಟ್ ಜ್ಯುವೆಲರಿ ಶಾಪ್ನಲ್ಲಿ ಈ ಘಟನೆ ನಡೆದಿದೆ.
ನಕಲಿ ಬಂಗಾರದ ಆಭರಣ ತಂದು ಕೈಚಳಕ ತೋರಿದ್ದಾಳೆ. ಈಕೆ ಬುರ್ಖಾ ತೆಗೆದು ಮುಖ ತೋರಿಸುತ್ತಿದ್ದಂತೆಯೇ ಅಂಗಡಿ ಮಾಲೀಕ ಪ್ರಜ್ಞೆ ತಪ್ಪಿದ್ದಾರೆ. ನಂತರ ಆಕೆ ಹೇಳಿದಂತೆ ಸಾವಿರಾರು ರೂಪಾಯಿ ಹಣ ಕೊಟ್ಟಿದ್ದಾರೆ!
ಇದೇ ರೀತಿ ಯಲಹಂಕ ಆರ್.ಟಿ ನಗರ ಸೇರಿದಂತೆ ಹಲವೆಡೆ ಮಹಿಳೆ ವಂಚನೆ ಮಾಡಿರುವುದು ತಿಳಿದುಬಂದಿದೆ. ಮುಖ ತೋರಿಸಿ ಕೈ ಮುಟ್ಟುತ್ತಿದ್ದಂತೆಯೇ ಅಂಗಡಿಯವರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ನಂತರ ಆಕೆ ಹೇಳಿದಂತೆ ಹಣ, ಒಡವೆ ಕೊಡುತ್ತಿರುವುದು ತಿಳಿದುಬಂದಿದೆ. ಇದರಿಂದಾಗಿ ಚಿನ್ನದಂಗಡಿಯ ಮಾಲೀಕರಿಗೆ ಆತಂಕ ಎದುರಾಗಿದೆ.