ಕಣ್ಣಿಗೆ ಕಾಣುವ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳ ಜೋಡಾಟ ಆಕಾಶದಲ್ಲಿ ನಡೆಯುತ್ತಿದ್ದು, ಮಾರ್ಚ್ 2 ರಂದು ಸಂಜೆ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಎರಡೂ ಗ್ರಹಗಳು ಸುಂದರವಾಗಿ ಗೋಚರವಾಗಲಿವೆ ಎಂದು ಭೌತಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ. ಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದ್ದು, ಶುಕ್ರ ಗ್ರಹವು 20.5 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಗುರು ಗ್ರಹ 86 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಗುರು ಗ್ರಹದ ಗಾತ್ರ ಶುಕ್ರ ಗ್ರಹಕ್ಕಿಂತ 1,400 ಪಟ್ಟು ದೊಡ್ಡದಿದೆ. ಸ್ವಯಂಪ್ರಭೆ ಇಲ್ಲದ ವಾತಾವರಣದಲ್ಲಿರುವ ಕಾರ್ಬನ್ ಗ್ರಹದ ಹಾಗೂ ಸಲ್ಫರ್ ಡೈ ಆಕ್ಸೆಡ್‌ನ ತೆಳು ಕವಚ 80 ಅಂಶ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತದೆ. ಶುಕ್ರ ಗ್ರಹವು ಆಗಸ್ಟ್ವರೆಗೂ ಬೇರೆ ಬೇರೆ ಎತ್ತರದಲ್ಲಿ ಗೋಚರಿಸಲಿದ್ದು, ಗುರು ಗ್ರಹ ಕೆಲವೇ ದಿನಗಳಲ್ಲಿ ಮರೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.