ವಿರೋಧಿಗಳಿಂದ ಕನಕಪುರ ಚಲೋ : ತಬ್ಬಿಬ್ಬಾದ ಡಿ.ಕೆ.ಶಿವಕುಮಾರ್

ಶನಿವಾರ, 11 ಜನವರಿ 2020 (16:54 IST)
ಏಸುಕ್ರಿಸ್ತನ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರೋ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳತೊಡಗಿವೆ.

ಜ. 13 ರಂದು ಕನಕಪುರ ಚಲೋ ಹಮ್ಮಿಕೊಂಡಿರೋದು ಡಿಕೆಶಿ ತಲೆನೋವಿಗೆ ಕಾರಣವಾಗಿದೆ.

ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಪ್ರತಿಭಟನೆ ಹಾದಿ ಹಿಡಿದಿರೋ ವಿರೋಧಿಗಳಿಗೆ ಟಾಂಗ್ ನೀಡಿರೋ ಡಿಕೆಶಿ, ಕನಕಪುರ ಚಲೋ ಹೆಸರಿನಲ್ಲಿ ಕೋಮುಸಾಮರಸ್ಯ ಹಾಳು ಮಾಡಲಾಗುತ್ತಿದೆ. ಹಿಂಸಾಚಾರಕ್ಕೆ ಪ್ರೇರಣೆ ನೀಡೋದು ಹಾಗೂ ಗಲಭೆ ಸೃಷ್ಟಿಸೋ ಹುನ್ನಾರ ನಡೆದಿದೆ ಅಂತ ದೂರಿದ್ದಾರೆ.

ಕನಕಪುರದ ಜನರು ಶಾಂತಿಪ್ರಿಯರಾಗಿದ್ದು, ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಅವರ ಮಾತಿಗೆ ಮರಳಾಗೋಲ್ಲ ಅಂತ ಹೇಳಿದ್ದಾರೆ ಡಿಕೆಶಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ