ಮದ್ಯ ಪಾರ್ಸಲ್ ನಿಂದ ಕಂಗಾಲಾದ ರೆಸ್ಟೊರೆಂಟ್ ಮಾಲೀಕರು

ಮಂಗಳವಾರ, 1 ಅಕ್ಟೋಬರ್ 2019 (16:35 IST)
ಪರವಾಣಿಗೆ ರಹಿತ ರೆಸ್ಟೋರೆಂಟ್ ಗಳಲ್ಲಿ ಮಧ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಪಾರ್ಸಲ್ ಕೊಡಲು ಪರವಾನಿಗೆ ಇಲ್ಲದ ಅಂಗಡಿಗಳಲ್ಲಿ ನಾಮಫಲಕ ಹಾಕಿ ಪಾರ್ಸಲ್ ಕೊಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಹಣ ಕರ್ಚು ಮಾಡಿ ಪರವಾನಿಗೆ ಪಡೆದ ರೆಸ್ಟೋರಂಟ್ ಮತ್ತು ಬಾರಗಳಿಗೆ ಬಾರಿ ಹೊಡೆತ ಬೀಳುತ್ತಿದೆ ಎಂಬ ಕೂಗು ಕೇಳಿಬರಲಾರಂಭಿಸಿದೆ.

ಕಾನೂನಿನ ಹೆಸರಲ್ಲಿ ಪ್ರವಾಸೋದ್ಯಮ ಮತ್ತು ಆಹಾರೋದ್ಯಮದ ಮೇಲೆ ಹಿಡಿತ ಸಾಧಿಸುತ್ತಿರುವುದರಿಂದ ಬೆಳಗಾವಿ  ಜಿಲ್ಲೆಯಲ್ಲಿಯಲ್ಲಿ ವ್ಯಾಪಾರ ವ್ಯವಹಾರಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಹೀಗಂತ ಕರ್ನಾಟಕ ಪ್ರವಾಸೋದ್ಯಮ & ಹೊಟೇಲ್ ಮಾಲೀಕರ ಸಂಘವು ಕಳವಳ ವ್ಯಕ್ತಪಡಿಸಿದೆ.

ಬೆಳಗಾವಿ ಸಂಘದ ಅಧ್ಯಕ್ಷ ಉಮೇಶ ಬಾಳಿ ಮಾತನಾಡಿ, ರಾಜ್ಯ ಸರಕಾರದಿಂದ ನಡೆಸಲ್ಪಡುವ ಹಲವಾರು ಹಬ್ಬ, ಜಯಂತಿ ಆಚರಣೆಗಳ ಸಂದರ್ಭ ಜಿಲ್ಲಾಡಳಿತ ವರ್ಷಕ್ಕೆ ಕನಿಷ್ಠ 25 ರಿಂದ 30 dry day ಘೋಷಣೆ ಮಾಡಲಾಗುತ್ತಿದೆ. ಇದರಿಂದ ಉದ್ಯಮಕ್ಕೆ ಭಾರಿ ಹೊಡೆತ ಬಿಳುತ್ತಿದೆ. ಇತರ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಕೊಡುವಷ್ಟು ಆದ್ಯತೆಯನ್ನು ನಮ್ಮ ರಾಜ್ಯದಲ್ಲಿ ಕೊಡದಿರುವುದು ವಿಷಾಧದ ಸಂಗತಿ.

ಪರವಾನಿಗೆ ರಹಿತ ರೆಸ್ಟೋರೆಂಟ್ ಗಳಲ್ಲಿ ಮಧ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಮತ್ತು ಪಾರ್ಸಲ್ ಕೊಡಲು ಪರವಾನಿಗೆ ಇಲ್ಲದ ಅಂಗಡಿಗಳಲ್ಲಿ ನಾಮಫಲಕ ಹಾಕಿ ಪಾರ್ಸಲ್ ಕೊಡುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಹಣ ಕರ್ಚು ಮಾಡಿ ಪರವಾಣಿಗೆ ಪಡೆದ ರೆಸ್ಟೋರಂಟ್ ಮತ್ತು ಬಾರಗಳಿಗೆ ಭಾರಿ ಹೊಡೆತ ಬೀಳುತ್ತಿದ್ದು, ಅಪಾರ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಹೊಸ ವಾಹನ ಸಂಚಾರ ಕಾಯ್ದೆಯಲ್ಲಿ ಎಲ್ಲ ನಿಯಮಗಳ ಉಲ್ಲಂಘನೆಗೆ ದಂಡ ಇಳಿಸಲಾಗಿದೆ. ಆದರೂ ಮದ್ಯ ಸೇವಸಿ ವಾಹನ ಚಾಲನೆಯ ದಂಡ ಕಡಿಮೆ ಮಾಡದಿರುವುದರಿಂದಲೂ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ