ಕನ್ನಡ ಸಾಹಿತ್ಯ ಸಮ್ಮೇಳನ : ಮೈಸೂರು, ಧಾರವಾಡ ದಾಖಲೆ ಮುರಿದ ಕಲಬುರಗಿ
ಸಾಂಸ್ಕೃತಿಕ ಸಿರಿವಂತ ಹಾಗೂ ಸಾಮರಸ್ಯದ ನೆಲವಾಗಿರುವ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಾಖಲೆಯ ಪ್ರಮಾಣದಲ್ಲಿ ಸಾಹಿತ್ಯಾಸಕ್ತರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಹಿಂದೆ ನಡೆದ ರಾಯಚೂರಿನಲ್ಲಿ 12500, ಮೈಸೂರಿನಲ್ಲಿ 13000 ಹಾಗೂ ಧಾರವಾಡದಲ್ಲಿ 13500 ಜನ ನೋಂದಣಿ ಮಾಡಿಕೊಂಡಿದ್ದರು. ಆದರೆ ಕಲಬುರಗಿಯಲ್ಲಿ ದಾಖಲೆಯಾಗಿ 21,000 ಜನ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 15178 ಪುರುಷರು ಮತ್ತು 5852 ಮಹಿಳೆಯರು ಸೇರಿದ್ದಾರೆ.
ಇದರಲ್ಲಿ ಕಲಬುರಗಿ ಜಿಲ್ಲೆಯಿಂದ 3500 ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.