ಮೈಸೂರು ಬ್ಯಾಂಕ್ ಸರ್ಕಲ್`ನಲ್ಲಿದ್ದ ಕನ್ನಡ ಚಳುವಳಿಯನ್ನ ಬೀದರ್`ವರೆಗೆ ಕೊಂಡೊಯ್ದಿದ್ದೇವೆ: ನಾರಾಯಣಗೌಡ

ಸೋಮವಾರ, 12 ಜೂನ್ 2017 (13:58 IST)
ಈ ನಾಡಿನ ಹಿತ ಚಿಂತನೆ ಇರುವುದಾದರೆ ನಮ್ಮ ಪ್ರತಿಷ್ಠೆಗಳನ್ನ ಬಿಟ್ಟು ಹೋರಾಟ ನಡೆಸೋಣ, ಇಲ್ಲವೆ ತೆಪ್ಪಗೆ ಇರೋಣ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.

ಕನ್ನಡಕ್ಕಾಗಿ ನಿಜವಾಗಿ ಹೋರಾಟ ನಡೆಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಕರವೇ ಏನೆಂಬುದು ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್`ನಲ್ಲಿದ್ದ ಕನ್ನಡ ಚಳುವಳಿಯನ್ನ ಬೀದರ್`ವರೆಗೆ ಕೊಂಡೊಯ್ದಿದ್ದೇವೆ. ಕನ್ನಡ ಶಾಲು, ಬಾವುಟವನ್ನ ಮೂಲೆ ಮೂಲೆಗೂ ಕೊಂಡೊಯ್ದಿದ್ದೇವೆ ಎಂದು ನಾರಾಯಣಗೌಡರು ಖಾಸಗಿ ಚಾನಲ್`ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಾಣವನ್ನ ಒತ್ತೆ ಇಟ್ಟು ಕನ್ನಡಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹೋರಾಟ ನಡೆಸಿದ್ದಾರೆ. ನಮ್ಮ ಮೇಲೆ 920ಕ್ಕೂ ಅಧಿಕ ಕೇಸ್`ಗಳಿವೆ. ಎಲ್ಲೋ ಕೂತು ಬಂದ್ ಬಂದ್ ಬಂದ್ ಎಂದರೆ ಆಗುವುದಿಲ್ಲ. ಕರ್ನಾಟಕ ಬಂದ್ ಎಂದರೆ ಕೇವಲ ಬೆಂಗಳೂರು ಬಂದ್ ಅಲ್ಲ ಎಂದು ನಾರಾಯಣಗೌಡರು ಹೇಳಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ