ಬೆಂಗಳೂರು ಬದಲು ನೇಪಾಳದ ಕಸದ ರಾಶಿ ಹಾಕಿ ಎಡವಟ್ಟು ಮಾಡಿದ ರಾಜ್ಯ ಬಿಜೆಪಿ!
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಆಡಳಿತ ವೈಫಲ್ಯ ತೋರಿಸಲು ಬಿಜೆಪಿ ತನ್ನ ಟ್ವಿಟರ್ ಪೇಜ್ ನಲ್ಲಿ ಬೆಂಗಳೂರಿನ ಕಸದ ಸಮಸ್ಯೆ, ರಸ್ತೆ ಗುಂಡಿಗಳನ್ನು ಫೋಟೋ ಸಮೇತ ಪ್ರಕಟಿಸಿ ತರಾಟೆಗೆ ತೆಗೆದುಕೊಳ್ಳಲು ಉದ್ದೇಶಿಸಿತ್ತು.
ಆದರೆ ಅದೀಗ ಸ್ವತಃ ಬಿಜೆಪಿಗೆ ಮುಳುವಾಗಿದೆ. ಬೆಂಗಳೂರಿನ ಫೋಟೋ ಹಾಕುವ ಬದಲು ನೆರೆಯ ರಾಷ್ಟ್ರ ನೇಪಾಳದ ಕಠ್ಮಂಡು ನಗರದ ಫೋಟೋ, ಮಿಝೋರಾಂನ ರಸ್ತೆ ಗುಂಡಿಗಳ ಫೋಟೋ ಹಾಕಿ ಎಡವಟ್ಟು ಮಾಡಿದೆ. ಇದೀಗ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದು, ಸ್ಥಳೀಯರಾದ ನಿಮಗೇ ನಿಮ್ಮ ನಗರದ ಫೋಟೋ ಗೊತ್ತಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ.