ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತಂದು ಪ್ರಧಾನಿ ಮೋದಿ ಮಾಸ್ಟರ್ ಪ್ಲ್ಯಾನ್ ಏನಿತ್ತು ಎಂಬುದನ್ನು ರಾಜ್ಯ ಬಿಜೆಪಿ ಘಟಕ ರಿವೀಲ್ ಮಾಡಿದೆ.
ಮೊನ್ನೆಯಷ್ಟೇ ಲೋಕಸಭೆಯಲ್ಲಿ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಗೆ ಸ್ಪರ್ಧಿಸಲು ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಲಾಗಿತ್ತು. ಆದರೆ ವಿಪಕ್ಷಗಳು ಇದನ್ನು ವಿರೋಧಿಸಿ ಮತ ಹಾಕಿದ್ದವು. ಪರಿಣಾಮ ಸಂಸತ್ ನಲ್ಲಿ ಬಹುಮತ ಸಿಗದೇ ಮಸೂದೆ ಬಿದ್ದು ಹೋಗಿತ್ತು.
ಆದರೆ ಈ ಮಸೂದೆ ಜಾರಿಗೆ ತರುವ ಮೋದಿ ಮಾಸ್ಟರ್ ಪ್ಲ್ಯಾನ್ ಬೇರೆಯೇ ಇತ್ತು ಎಂದು ಬಿಜೆಪಿ ಹೇಳಿಕೊಂಡಿದೆ. ಯಾವುದೇ ರಾಜ್ಯಗಳ ಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳದೆ ನಾರಿ ಶಕ್ತಿ ವಂದನಾ ಅಧಿನಿಯಮವು ಲೋಕಸಭಾ ಸ್ಥಾನಗಳನ್ನು 543 ರಿಂದ 815ಕ್ಕೆ ವಿಸ್ತರಿಸಿ 33% ಮಹಿಳಾ ಮೀಸಲಾತಿಯನ್ನು ಹೆಚ್ಚುವರಿ ಸ್ಥಾನಗಳ ಮೂಲಕ ನೀಡುವುದನ್ನು ಪ್ರಸ್ತಾಪಿಸಿತ್ತು.
ಯಾವುದೇ ಹಾಲಿ ಸಂಸದರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಯಾವುದೇ ರಾಜ್ಯಗಳು ತಮ್ಮ ಪಾಲು ಕಳೆದುಕೊಳ್ಳುತ್ತಿರಲಿಲ್ಲ, ಹೆಚ್ಚು ಧ್ವನಿಗಳು ಸೇರಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲಿದ್ದವು. ಆದರೂ ಪ್ರತಿಪಕ್ಷಗಳು ಮಹಿಳೆಯರಿಗೆ ಅವರ ಹಕ್ಕು ನೀಡುವುದನ್ನು ಮತ್ತೊಮ್ಮೆ ವಿರೋಧಿಸಿವೆ ಎಂದು ಬಿಜೆಪಿ ಹೇಳಿದೆ.