Karnataka Bye Election result: ಬಿಜೆಪಿ,ಜೆಡಿಎಸ್ ಮೈತ್ರಿಗೆ ಮುಖಭಂಗವಾಗಲು ಇದೇ ಕಾರಣ

Sampriya

ಶನಿವಾರ, 23 ನವೆಂಬರ್ 2024 (16:57 IST)
Photo Courtesy X
ಬೆಂಗಳೂರು:  ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಬಾರೀ ಮುಖಭಂಗವಾಗಿದೆ.  ಆಡಳಿತ ಕಾಂಗ್ರೆಸ್ ಪಕ್ಷ ಮೂರು ಕ್ಷೇತ್ರಗಳಲ್ಲೂ  ಗೆಲುವಿನ ನಗೆ ಬೀರಿದ್ದು, ಕೈ ನಾಯಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.  ಇದೀಗ ಸೋಲಿನ ಬಗ್ಗೆ ಬಿಜೆಪಿ ಲೆಕ್ಕಾಚಾರ ಹಾಕಲು ಶುರುಮಾಡಿದೆ.

ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿಪಿ ಯೋಗೇಶ್ವರ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಇದೀಗ ಸೈನಿಕನಿಗೆ ಮತದಾರರು ಗೆಲುವಿನ ನಗೆಯನ್ನು ಬೀರಿದ್ದಾರೆ.

ಇನ್ನೂ ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಹಾಗೂ ಬಿಜೆಪಿ ಅಭ್ಯರ್ಥಿ ಸೋಲಿಗೆ ದೊಡ್ಡ ಕಾರಣಗಳು ಹೀಗಿದೆ.

ಎಚ್ ಕುಮಾರಸ್ವಾಮಿ ಅವರ ಈ ಹಿಂದಿನ ವಿಧಾನಸಭಾ ಕ್ಷೇತ್ರವಾಗಿದ್ದ ಚನ್ನಪಟ್ಟಣದಲ್ಲಿ ಅಷ್ಟೊಂದು ಕಾಣಿಸಿಕೊಳ್ಳದೆ, ಅಭಿವೃದ್ಧಿ ಮಾಡದೆ ಇರುವುದು ಒಂದು ಕಾರಣವಾಗಿದೆ.  ಇನ್ನೊಂದು ಜಮೀರ್ ಹೇಳಿಕೆಯಿಂದ ಮುಸ್ಲಿಂ ಮತಬ್ಯಾಂಕ್‌ ಕಾಂಗ್ರೆಸ್‌ನತ್ತ ಧ್ರುವೀಕರಣ ಮಾಡಿತು. ಕುಮಾರಸ್ವಾಮಿ ಅವರು ಮುಸ್ಲಿಂಮರ ಮತವನ್ನು ನಂಬಿ ರಾಜಕಾರಣ ಮಾಡುತ್ತಿಲ್ಲ ಎಂಬ ಹೇಳಿಕೆಯನ್ನು ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಂಡು ಮುಸ್ಲಿಂರ ಮತವನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿ ಆಯಿತು.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸಾಕಷ್ಟು ಅಭ್ಯರ್ಥಿಗಳು ಇದ್ದರು. ಕುಟುಂಬ ರಾಜಕಾರಣಕ್ಕೆ ಮಣೆಹಾಕಿದ್ದನ್ನು ಮತದಾರರು ಒಪ್ಪಿಕೊಂಡಿಲ್ಲ. ಕ್ಷೇತ್ರದಲ್ಲಿ  ಬಸವರಾಜ ಬೊಮ್ಮಾಯಿ ಏಕಾಂಗಿಯಾಗಿ ಮತಬೇಟೆ ನಡೆಸಬೇಕಾಯಿತು. ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲವನ್ನು ಸಿದ್ದರಾಮಯ್ಯ ಅವರು ಚಾಣಕ್ಷದಿಂದ ಬಗೆಹರಿಸಿದ್ದು ಕಾಂಗ್ರೆಸ್‌ಗೆ ಲಾಭವಾಯಿತು. ಇನ್ನೂ ಬಿಜೆಪಿಯಲ್ಲಿದ್ದ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ ಎನ್ನಬಹುದು.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಆರಂಭಿಕ ಟಿಕೆಟ್ ಹಂಚಿಕೆಯ ಗೊಂದಲ ಮೇಲ್ನೋಟಕ್ಕೆ ಬಗೆಹರಿದಿದ್ದರು, ಬೂದಿ ಮುಚ್ಚಿದ ಕೆಂಡದಂತಿತ್ತು. ಹಲವು ವರ್ಷಗಳ ಬಳಿಕ ಶಾಸಕ ಜನಾರ್ಧನ ರೆಡ್ಡಿ ಮಾತ್ತು ಮಾಜಿ ಸಚಿವೆ ಶ್ರೀರಾಮುಲು ಜಂಟಿಯಾಗಿ ಕಾರ್ಯಚರಣೆಗೆ ಇಳಿದರು, ಮ್ಯಾಜಿಗ್ ಮಾಡಲು ಸಾಧ್ಯವಾಗಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಚಾಣಕ್ಷ ನಡೆ ಕಾಂಗ್ರೆಸ್‌ಗೆ ವರದಾನವಾಯಿತು. ಕ್ಷೇತ್ರದಲ್ಲಿ ಹಲವು ಬಾರಿ ಶಾಸಕರಾಗಿದ್ದ ತುಕಾರಾಂ ಪತ್ನಿಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್‌ಗೆ ಲಾಭವಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ