ಟಿಕೆಟ್…ಟಿಕೆಟ್… ಯಾರ್ರೀ ಅಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಹಾಕಿರೋರು?!
ಬೆಂಗಳೂರಿನ ಖಾಸಗಿ ರೆಸ್ಟೋರೆಂಟ್ ನಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಘಟಾನುಘಟಿ ನಾಯಕರು ಸಭೆ ಸೇರಿ ಟಿಕೆಟ್ ಹಂಚಿಕೆ ಕುರಿತು ಫೈನಲ್ ಪಟ್ಟಿ ತಯಾರಿಸಲಿದ್ದಾರೆ.
ಸಹಜವಾಗಿಯೇ ಟಿಕೆಟ್ ಹಂಚಿಕೆ ನಂತರ ಕೆಲವು ನಾಯಕರ ಅಸಮಾಧಾನ ಸ್ಪೋಟಗೊಳ್ಳುವುದು ಸಹಜ. ಅತ್ತ ಟಿಕೆಟ್ ಆಕಾಂಕ್ಷಿ ನಾಯಕರು ತಮ್ಮ ಹೆಸರು ಮೇಲೆ ಇರುತ್ತಾ ಎಂದು ಕಾತುರದಿಂದ ಕಾಯುವಂತಾಗಿದೆ. ಹೀಗಾಗಿ ಇಂದಿನ ದಿನ ಕಾಂಗ್ರೆಸ್ ನಾಯಕರಿಗೆ ಅಗ್ನಿ ಪರೀಕ್ಷೆಯಾಗಲಿದೆ.