ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಯಾವಾಗ?
ವಿಧಾನಸಭೆ ಚುನಾವಣೆ ಏಪ್ರಿಲ್ ಅಥವಾ ಮೇ ಆರಂಭದಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡಲಿರುವ ಚುನಾವಣಾ ಆಯೋಗದ ಅಧಿಕಾರಿಗಳು ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಿದ್ದಾರೆ. ಆ ಬಳಿಕ ಅಂತಿಮ ದಿನಾಂಕವ ಪ್ರಕಟಿಸಲಾಗುವುದು ಎಂದಿದೆ.
ಚುನಾವಣೆ ಹಿನ್ನಲೆಯಲ್ಲಿ ಈ ವರ್ಷ ಶಾಲಾ, ಕಾಲೇಜುಗಳ ಪರೀಕ್ಷೆ ಬೇಗನೇ ನಡೆಯುತ್ತಿದ್ದು, ಏಪ್ರಿಲ್ ಎರಡನೇ ವಾರಕ್ಕೆ ಎಲ್ಲಾ ತರಗತಿಗಳ ಪರೀಕ್ಷೆಗಳು ಮುಕ್ತಾಯ ಕಾಣಲಿವೆ. ಅದಾದ ಬಳಿಕ ಚುನಾವಣೆ ನಡೆಯುವುದು ಖಚಿತವಾಗಿದೆ.