ನೂರು ಕೋಟಿ ಕ್ಲಬ್ ಸೇರಿದ ಕರ್ನಾಟಕ ಚುನಾವಣಾ ಅಕ್ರಮ

ಮಂಗಳವಾರ, 11 ಏಪ್ರಿಲ್ 2023 (16:52 IST)
ಚುನಾವಣಾ ನೀತಿ ಸಂಹಿತೆ  ಜಾರಿ ಆದ ನಂತರ ರಾಜ್ಯಾದ್ಯಂತ ನೂರು ಕೋಟಿ ಮೌಲ್ಯದ ಹಣ ಹಾಗೂ ಇತರೆ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.ಚುನಾವಣಾ ಅಧಿಸೂಚನೆ ಜಾರಿಯಾಗುವ ಮುನ್ನವೆ ರಾಜ್ಯದಲ್ಲಿ ಭರ್ಜರಿ ಬೇಟೆ ಶುರುವಾಗಿದೆ.ಚುನಾವಣಾ ಅಧಿಸೂಚನೆ ಪ್ರಕಟವಾದ ಮೇಲೆ ಇನ್ನಷ್ಟು ಅಕ್ರಮ ಸಾಧ್ಯತೆ ಇದೆ.ನಗರದಲ್ಲಿ FIR ಮೇಲೆ FIRಗಳು ದಾಖಲಾಗ್ತಿದೆ.ಸುಮಾರು 20ಕ್ಕೂ ಹೆಚ್ಚು FIR ಗಳು ದಾಖಲಾಗಿದೆ.
 
ಸುಮಾರು ನೂರು ಕೋಟಿಯ ನಗದು, ವಸ್ತುಗಳಲ್ಲಿ ಅತೀ ಹೆಚ್ಚು ಕುಕ್ಕರ್ ಗಳೆ ಸದ್ದು.ಪೊಲೀಸ್ರು  ಹಾಗೂ ಚುನಾವಣಾಧಿಕಾರಿಗಳ ಹದ್ದಿನ ಕಣ್ಣಿನಿಂದ ವಸ್ತು ನಗದು ಸೀಝ್ ಮಾಡಲಾಗಿದೆ.
 
ಸೀಝಾದ ವಸ್ತುಗಳಲ್ಲಿ ಗ್ಯಾಸ್ ಸ್ಟೌವ್ ,ಸೀರೆ ,ತವಾ,ಮಿಕ್ಸಿ ,ಕುಕ್ಕರ್ ,ಸೀರೆ ಹೀಗೆ ಮತದಾರರಿಗೆ ಆಮಿಷ ಒಡ್ಡಲು ದುಬಾರಿ ವಸ್ತುಗಳು ಅಕ್ರಮವಾಗಿ  ನಗರಕ್ಕೆ ಎಂಟ್ರಿ ಕೊಟ್ಟಿದೆ.
 
ಹಾಗಾಗಿ ನಗರದಲ್ಲಿ ಚುನಾವಣಾಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು,ಸರ್ಕಾರಿ ಬಸ್ ಗಳನ್ನೂ ಬಿಡದೆ ಪರಿಶೀಲನೆ ನಡೆಸ್ತಿದ್ದಾರೆ‌.100 ಕೋಟಿ ವಸ್ತುಗಳಲ್ಲಿ ಅತಿ ಹೆಚ್ಚು ಪತ್ತೆಯಾಗಿದ್ದ ನಗರದ ಗಡಿ ಭಾಗಗಳಲ್ಲಿ ,ಹೊಸೂರು , ದೇವನಹಳ್ಳಿ ಚೆಕ್ ಪೋಸ್ಟ್, ಹೊಸಕೋಟೆ ಭಾಗಗಳಲ್ಲಿ ಹೆಚ್ಚು ವಸ್ತುಗಳು ಪತ್ತೆ ಯಾಗಿದೆ.ಈಗ 100 ಕೋಟಿ ವಸ್ತುಗಳು ಕ್ಲಬ್ ಸೇರಿದೆ. ನಗರದಲ್ಲಿ ಪರಿಶೀಲನೆ ಮುಂದುವರಿಯುತ್ತಿರುವ ಹಿನ್ನಲೆ ಮತ್ತಷ್ಟು ವಸ್ತು , ನಗದು ಪತ್ತೆಯಾಗುವ ಸಾಧ್ಯತೆ ಇದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ