ಗಾಯನ, ಪಿಟೀಲು, ಮೃದಂಗ ಹಾಗೂ ಖಂಜಿರ ನುಡಿಸುತ್ತಿದ್ದ ಇವರು, 25 ಸಾವಿರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನೀಡಿದ್ದರು. ಅದಲ್ಲದೆ ಹಿಂದೂಸ್ತಾನಿ ಸಂಗೀತ ದಿಗ್ಗಜರಾದ ಪಂಡಿತ ಭೀಮಸೇನ ಜೋಶಿ ಹಾಗೂ ಪರಿಪ್ರಸಾದ್ ಚೌರಾಸಿಯ ಸೇರಿ ಹಲವರೊಂದಿಗೆ ಜುಗಲ್ಬಂದಿ ನಡೆಸುವವಲ್ಲಿ ಖ್ಯಾತರಾಗಿದ್ದರು.
ಕನ್ನಡ, ತಮಿಳು, ತೆಲಗು ಹಾಗೂ ಸಂಸ್ಕೃತ ಭಾಷೆಯಲ್ಲಿ 400ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಎಂ ಬಾಲಮುರಳಿಕೃಷ್ಣ ಅವರು, ಕನ್ನಡ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ಸಂಗೀತ ನೀಡಿದ್ದರು.