ಎರಡೂ ವಿಧೇಯಕಗಳನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಡಿಸಿದರು.
ಬಂಧಿಖಾನೆಗಳ ತಿದ್ದುಪಡಿ ವಿಧೇಯಕವು ಬಂಧಿಗಳೊಂದಿಗಿನ ಸಂಹನಕ್ಕಾಗಿ ಬಂಧಿಖಾನೆಯ ಪರಿಮತಿಯ ಒಳಗೆ ಮತ್ತು ಹೊರಗೆ ಉತ್ತಮ ವಾತಾವರಣವನ್ನು ನಿರ್ಮಿಸುವುದು, ಪೆರೋಲ್ ಉಲ್ಲಂಘನೆ ಮತ್ತು ಇನ್ಯಾವುದೇ ನಿಷೇಧಿತ ವಸ್ತುಗಳನ್ನು ಬಂಧಿಖಾನೆಯೊಳಗೆ ತರುವುದು ಅಥವಾ ಹೊರಗೆ ತೆಗೆದುಕೊಂಡು ಹೋಗುವ ಅಪಾಯವನ್ನು ನಿವಾರಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ 1963ರ ಕರ್ನಾಟಕ ಬಂಧಿಖಾನೆಗಳ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುತ್ತಿದೆ.