ನಾರಿಮನ್ ಬದಲು ಕಪಿಲ್ ಸಿಬಲ್?

ಸೋಮವಾರ, 3 ಅಕ್ಟೋಬರ್ 2016 (10:52 IST)
ಕಳೆದ 25 ವರ್ಷಗಳಿಂದ ಕಾವೇರಿ ಜಲ ವಿವಾದ ಪ್ರಕರಣದಲ್ಲಿ ಕರ್ನಾಟಕದ ಪರ ವಾದ ಮಂಡಿಸುತ್ತಿದ್ದ ಫಾಲಿ ನಾರಿಮನ್ ನೇತೃತ್ವದ ಕಾನೂನು ತಂಡ ನೈತಿಕ ಕಾರಣ ನೀಡಿ  ವಾದ ಮಂಡನೆಯಿಂದ ಹಿಂದೆ ಸರಿದಿದ್ದು ಸಮರ್ಥ ವಾದ ಮಂಡನೆಗಾಗಿ ಬೇರೆ ವಕೀಲರನ್ನು ಹುಡುಕಾಡುವ ಸಂಕಷ್ಟ ಕರ್ನಾಟಕಕ್ಕೆ ಎದುರಾಗಿದೆ. 

ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸೇರಿದಂತೆ ಅನೇಕ ಹಿರಿಯ ವಕೀಲರನ್ನು ಸಂಪರ್ಕಿಸಿರುವ ಕರ್ನಾಟಕ ಸುಪ್ರೀಂಕೋರ್ಟ್‌ನಲ್ಲಿ ರಾದ್ಯವನ್ನು ಪ್ರತಿನಿಧಿಸಲು ಕೋರಿಕೊಂಡಿದೆ. ಸಿಬಲ್ ಅವರ ರಾಜ್ಯವನ್ನು ಪ್ರತಿನಿಧಿಸುವ ಸಾಧ್ಯತೆಗಳು ದಟ್ಟವಾಗಿದ್ದು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಲ್ ಅವರ ಜತೆ ಮಾತನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
 
ಆದರೆ ಸುಪ್ರೀಂ ಆದೇಶ ಪಾಲನೆಯಾಗಿದಿದ್ದರೆ ವಾದ ಮಂಡಿಸುವುದು ಅಸಾಧ್ಯ. ಎಂತಹ ವಾದ ಮಂಡಿಸಿದರೂ ಪ್ರಯೋಜನವಾಗುವುದಿಲ್ಲ ಎಂದು ಸಿಬಲ್ ಸೇರಿದಂತೆ ಇತರ ಹಿರಿಯ ವಕೀಲರು ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 
ಇಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಕೈಗೊಳ್ಳುವ ನಿರ್ಧಾರ ಆಧಾರದ ಮೇಲೆ ತಮ್ಮ ನಿಲುವನ್ನು ತಿಳಿಸುತ್ತೇವೆ ಎಂದು ಕೆಲವರು ಭರವಸೆ ನೀಡಿದ್ದಾರೆ. 
 
ವಿಶೇಷ ಅಧಿವೇಶನದಲ್ಲಿ ನೀರು ಬಿಡುವ ನಿರ್ಧಾರ ಕೈಗೊಂಡಿದ್ದಲ್ಲಿ ನಾರಿಮನ್ ಅವರೇ ವಾದವನ್ನು ಮುಂದುವರೆಸಲಿದ್ದಾರೆ ಎನ್ನಲಾಗುತ್ತಿದೆ. 
 
ನಾರಿಮನ್ ನೇತೃತ್ವದ ತಂಡವನ್ನು ಬದಲಿಸುವಂತೆ ಸಹ ರಾಜ್ಯಾದ್ಯಂತ ಭಾರಿ ಬೇಡಿಕೆ ಕೇಳಿ ಬರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ