ಡಿಕೆ ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಂತೇ ಪ್ರಮುಖ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ
ಇತ್ತೀಚೆಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿರುವ ಡಿಕೆ ಶಿವಕುಮಾರ್ ತಮಗೆ ಸೂಕ್ತ ಸಮಯದಲ್ಲಿ ಸಿಎಂ ಪಟ್ಟ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ತಕ್ಕಂತೆ ಅಸ್ಸಾಂ ಚುನಾವಣೆ ಹೊಣೆಯೂ ಡಿಕೆಶಿಗೆ ಹೆಗಲಿಗೊಪ್ಪಿಸಲಾಗಿದೆ.
ಇದರ ನಡುವೆಯೇ ಈಗ ಸಿದ್ದರಾಮಯ್ಯನವರು ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ತಮ್ಮದು ಕುರಿ ಕಾಯುವ ಸಮುದಾಯ ಎಂದು ಸಿಎಂ ಮೊನ್ನೆ ಟ್ವೀಟ್ ಮಾಡಿದ್ದರು. ಅವರ ಈ ಅಸ್ತ್ರ ಕಾಂಗ್ರೆಸ್ ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ಈಗ ಕಾಂಗ್ರೆಸ್ ನಲ್ಲಿ ದಲಿತ ಸಮುದಾಯದವರು ಸಿಎಂ ಆಗಲಿ ಎನ್ನುವ ಕೂಗು ಹೆಚ್ಚಾಗುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಬಣವೂ ಬೆಂಬಲ ನೀಡುತ್ತಿದೆ. ಇದು ಸಿದ್ದರಾಮಯ್ಯಗೆ ಪ್ಲಸ್ ಪಾಯಿಂಟ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ.