2016 ಏಪ್ರಿಲ್‌ನಿಂದ 2017 ಮಾರ್ಚ್ವರೆಗೆ ರಾಜ್ಯದಲ್ಲಿ 7.2 ಲಕ್ಷ ಯೂನಿಟ್ ರಕ್ತ ಸಂಗ್ರಹವಾಗಿದೆ. ಈ ಅವಧಿಗೆ ಸರ್ಕಾರ 6.25 ಲಕ್ಷ ಯೂನಿಟ್ ಸಂಗ್ರಹ ಗುರಿ ಇಟ್ಟುಕೊಂಡಿತ್ತು. ಆದರೆ, ನಿರೀಕ್ಷೆಗೂ ಮೀರಿ ಅಂದರೆ ಶೇ.109 ಸಾಧನೆಯಾಗಿದೆ. ಮಹಾರಾಷ್ಟ್ರದ ಆರ್‌ಟಿಐ ಕಾರ್ಯಕರ್ತರೊಬ್ಬರು ನೀಡಿದ ಮಾಹಿತಿ ಬಳಿಕ ಎಚ್ಚೆತ್ತುಕೊಂಡಿರುವ ಕರ್ನಾಟಕ ಏಡ್ಸ್ ನಿಯಂತ್ರಣ ಸಂಸ್ಥೆ (ಕಸಪ್ಸ್) ಅಮೂಲ್ಯವಾದ ರಕ್ತ ವ್ಯರ್ಥವಾಗದಂತೆ ತಡೆಯಲು ಮುಂದಾಗಿದ್ದು, ಮೊದಲಿಗೆ ಖಾಸಗಿ ರಕ್ತನಿಧಿ ಕೇಂದ್ರಗಳಿಗೆ ಕಡಿವಾಣ ಹಾಕಲು ಚಿಂತನೆ ನಡೆಸಿದೆ.