Karnataka Weather: ವಾರಂತ್ಯಕ್ಕೆ ರಾಜ್ಯದಲ್ಲಿ ಮಳೆ ಸಾಧ್ಯತೆಯಿದೆಯಾ, ಇಲ್ಲಿದೆ ಹವಾಮಾನ ವರದಿ
ಈ ವಾರ ರಾಜ್ಯದ ಹವಾಮಾನದಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದೆ. ಆರಂಭದಲ್ಲಿ ಮಳೆ, ನಂತರ ಚಳಿ, ಈಗ ಹಗಲಿಡೀ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಅದರಲ್ಲೂ ಸಂಜೆ ಮತ್ತು ಬೆಳಿಗ್ಗೆ ಮಂಜು ಕೂಡಾ ಬೀಳುತ್ತಿದೆ.
ಹವಾಮಾನ ವರದಿಗಳ ಪ್ರಕಾರ ವಾರಂತ್ಯಕ್ಕೆ ರಾಜ್ಯದಲ್ಲಿ ಮಳೆಯ ಸಾಧ್ಯತೆಯಿಲ್ಲ. ಆದರೆ ಬಹುತೇಕ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರುವುದು. ಮಂಜಿನ ದಟ್ಟಣೆಯೂ ಹೆಚ್ಚಾಗುವ ಸೂಚನೆಯಿದೆ. ನಿನ್ನೆಗೆ ಹೋಲಿಸಿದರೆ ಇಂದು ಮತ್ತು ನಾಳೆ ತಾಪಮಾನದಲ್ಲಿ ಕೊಂಚ ಏರಿಕೆಯಾಗಲಿದೆ.
ಇಂದು ರಾಜ್ಯದ ಗರಿಷ್ಠ ತಾಪಮಾನ 28 ಡಿಗ್ರಿಯಷ್ಟಿರಲಿದ್ದರೆ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿರಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇದೇ ರೀತಿಯ ವಾತಾವರಣವಿರಲಿದ್ದು ಬೆಳಗ್ಗಿನ ಹೊತ್ತು ದಟ್ಟ ಮಂಜು ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.