Karnataka Weather: ರಾಜ್ಯದಲ್ಲಿ ಮತ್ತೆ ಹೆಚ್ಚಾಗಲಿದೆ ಚಳಿ, ಈ ವಾರದ ಹವಾಮಾನ ವರದಿ

Krishnaveni K

ಸೋಮವಾರ, 19 ಜನವರಿ 2026 (08:53 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರ ಕೊಂಚ ಮಟ್ಟಿಗೆ ಚಳಿ ಕಡಿಮೆಯಾಗಿತ್ತು. ಆದರೆ ಈ ವಾರದಿಂದ ಚಳಿ ಮತ್ತೆ ಹೆಚ್ಚಾಗಲಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಈ ವಾರದ ಹವಾಮಾನ ವರದಿ ಇಲ್ಲಿದೆ.

ಕಳೆದ ವಾರ ವಾಯು ಭಾರ ಕುಸಿತದಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದರೆ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿತ್ತು. ವಾರಂತ್ಯಕ್ಕೆ ಚಳಿ ಕಡಿಮೆಯಾಗಿ ಬಿಸಿಲು ಕಂಡುಬಂದಿತ್ತು.

ಆದರೆ ಈ ವಾರ ಮತ್ತೆ ಚಳಿ ಹೆಚ್ಚಾಗಲಿದೆ. ಹಗಲು ಬಿಸಿಲಿನ ವಾತಾವರಣವಿರಲಿದ್ದು ರಾತ್ರಿ ಚಳಿ ತೀವ್ರವಾಗಲಿದೆ ಎನ್ನುತ್ತಿದೆ ಹವಾಮಾನ ವರದಿಗಳು. ಮುಂದಿನ ಒಂದು ವಾರ ಕಾಲ ಚಳಿ ತೀವ್ರತೆ ಹೆಚ್ಚಾಗಲಿದ್ದು ಅದಾದ ಬಳಿಕ ಕೊಂಚ ಚಳಿ ಕಡಿಮೆಯಾಗುವ ನಿರೀಕ್ಷೆಯಿದೆ.

ಈ ವಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 27 ಡಿಗ್ರಿಯಷ್ಟು ಕಂಡುಬರುವುದು. ಕನಿಷ್ಠ ತಾಪಮಾನ ವಾರದ ಆರಂಭದಲ್ಲಿ 17 ಡಿಗ್ರಿಯಷ್ಟಿರಲಿದ್ದು, ವಾರ ಕಳೆದಂತೆ 16 ಡಿಗ್ರಿಗೆ ಇಳಿಕೆಯಾಗುವ ಸಂಭವವಿದೆ. ವಿಶೇಷವಾಗಿ ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತೀವ್ರ ಚಳಿಯಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ