ಕರ್ನಾಟಕ ಹವಾಮಾನ: ಇಂದು ಮಳೆ ಸಾಧ್ಯತೆಯಿದೆಯೇ ಇಲ್ಲಿದೆ ವರದಿ

Krishnaveni K

ಶುಕ್ರವಾರ, 31 ಜನವರಿ 2025 (08:46 IST)
ಬೆಂಗಳೂರು: ರಾಜ್ಯದಲ್ಲಿ ಹವಾಮಾನದಲ್ಲಿ ಸಣ್ಣ ಬದಲಾವಣೆಯಾಗುತ್ತಿದ್ದು ಇಂದಿನಿಂದ ಮಳೆ ಸಾಧ್ಯತೆಯಿದೆಯೇ ಎಂಬ ಹವಾಮಾನ ವರದಿ ಇಲ್ಲಿದೆ ನೋಡಿ.

ಕಳೆದ ಒಂದು ವಾರದಿಂದ ಶೀತ ಗಾಳಿಯಿದ್ದು, ತಾಪಮಾನದಲ್ಲಿ ಸಣ್ಣ ಮಟ್ಟಿಗೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಕನಿಷ್ಠ ತಾಪಮಾನ 17 ಡಿಗ್ರಿಯಷ್ಟಿತ್ತು. ಇಂದು ಇದು 20 ಡಿಗ್ರಿ ಸೆಲ್ಶಿಯಸ್ ವರೆಗೆ ಏರಿಕೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ ಇಂದು 29 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ.

ಹವಾಮಾನ ವರದಿ ಪ್ರಕಾರ ಫೆಬ್ರವರಿ 1 ಮತ್ತು 2 ರಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿತ್ತು. ಇದೀಗ ಇಂದಿನ ಪ್ರಕಾರ ನಾಳೆಯಿಂದ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮತ್ತು ಸಣ್ಣ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಆ ಪ್ರಕಾರ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಕಡೆಗಳಲ್ಲಿ ಒಣ ಹವೆ ವಾತಾವರಣ ಮುಂದುವರಿಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ