Karnataka Weather: ರಾಜ್ಯದ ಜನತೆಗೆ ಗುಡ್ ನ್ಯೂಸ್, ಈ ವಿಶೇಷ ದಿನಕ್ಕೆ ಮೊದಲು ಬರಲಿದೆ ಮತ್ತೆ ಮಳೆ
ರಾಜ್ಯದಲ್ಲಿ ಈ ಬಾರಿ ಬಿಸಿಲಿನ ತಾಪ ವಿಪರೀತವಾಗಿರಲಿದೆ ಎಂದು ಹವಾಮಾನ ವರದಿಗಳು ಈಗಾಗಲೇ ಹೇಳಿವೆ. ಅದೇ ರೀತಿ ಮುಂಗಾರು ಪೂರ್ವ ಮಳೆಯೂ ಉತ್ತಮವಾಗಿರಲಿದೆ ಎಂದು ವರದಿ ನೀಡಿದ್ದವು.
ಅದಕ್ಕೆ ತಕ್ಕಂತೇ ಮಾರ್ಚ್ ನಲ್ಲೇ ಬಿಸಿಲು ಹೆಚ್ಚಾದರೂ ಮಳೆಯೂ ಬರುತ್ತಿದೆ. ಕಳೆದ ವಾರ ಆರಂಭದಲ್ಲಿ ಮಳೆಯಾಗಿತ್ತು. ಮಾರ್ಚ್ 30 ರಂದು ಯುಗಾದಿ ಹಬ್ಬವಿದ್ದು ಇದಕ್ಕೆ ಮೊದಲು ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು, ಕೊಡಗು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ. ಬಳಿಕ ಏಪ್ರಿಲ್ ನಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.