Karnataka Weather: ಅವಧಿಗೆ ಮುನ್ನ ಬೇಸಿಗೆ ಆರಂಭ, ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ

Krishnaveni K

ಶುಕ್ರವಾರ, 13 ಫೆಬ್ರವರಿ 2026 (09:02 IST)
ಬೆಂಗಳೂರು: ಈ ಬಾರಿ ಮಳೆಗಾಲ, ಚಳಿಗಾಲ ತೀವ್ರವಾಗಿತ್ತು. ಅದೇ ರೀತಿ ಬೇಸಿಗೆಯೂ ತೀವ್ರವಾಗಿರಲಿದೆ. ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆಯಾಗಲಿದೆ ತಪ್ಪದೇ ಗಮನಿಸಿ.

ಈ ಬಾರಿ ಬೇಸಿಗೆ ಅವಧಿಗಿಂತ ಮುನ್ನವೇ ಕಾಲಿಡಲಿದೆ ಎಂದು ಈಗಾಗಲೇ ಹವಾಮಾನ ವರದಿಗಳು ಹೇಳಿವೆ. ನಿನ್ನೆಯವರೆಗೂ ಬಿಸಿಲಿನ ತಾಪ ಹೆಚ್ಚಾಗಿದ್ದರೂ ಗರಿಷ್ಠ ತಾಪಮಾನ 28-29 ಡಿಗ್ರಿಯಷ್ಟೇ ಇತ್ತು. ಆದರೆ ಇಂದಿನಿಂದ ತಾಪಮಾನದಲ್ಲಿ ದಿಡೀರ್ ಏರಿಕೆಯಾಗಲಿದೆ.

ಫೆಬ್ರವರಿ ಮೂರನೇ ವಾರದಿಂದ ಬೇಸಿಗೆ ಆರಂಭವಾಗಲಿದೆ ಎಂದು ವರದಿಗಳು ಸೂಚನೆ ನೀಡಿವೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತ 2-3 ಡಿಗ್ರಿಯಷ್ಟು ಹೆಚ್ಚು ತಾಪಮಾನ ಕಂಡುಬರಲಿದೆ. ಈ ತಿಂಗಳ ಅಂತ್ಯಕ್ಕೆ ಗರಿಷ್ಠ ತಾಪಮಾನ 37 ಡಿಗ್ರಿಯವರೆಗೂ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.

ಇಂದು ರಾಜ್ಯದ ಗರಿಷ್ಠ ತಾಪಮಾನ 30 ಡಿಗ್ರಿ ದಾಟಲಿದೆ. ಬಿಸಿಲಿನ ಝಳ ಹೆಚ್ಚಾಗಲಿದೆ. ಇಂದು ಕನಿಷ್ಠ ತಾಪಮಾನ ಸರಾಸರಿ 17 ಡಿಗ್ರಿಯಷ್ಟು ಕಂಡುಬರುವುದು. ಗರಿಷ್ಠ ತಾಪಮಾನದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಂಡುಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ