Karnataka Weather: ವಿಪರೀತ ಚಳಿ ನಡುವೆ ಈ ವಾರದ ಹವಾಮಾನ ವರದಿ ಗಮನಿಸಿ

Krishnaveni K

ಸೋಮವಾರ, 15 ಡಿಸೆಂಬರ್ 2025 (08:26 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ವಾರವಿಡೀ ವಿಪರೀತ ಚಳಿಯ ವಾತಾವರಣವಿತ್ತು. ಈ ವಾರವೂ ಚಳಿ ಮುಂದುವರಿಯಲಿದ್ದು ಹವಾಮಾನ ವರದಿ ಏನು ಹೇಳುತ್ತದೆ ಗಮನಿಸಿ.

ಕಳೆದ ವಾರ ರಾಜ್ಯದಲ್ಲಿ ಸರಾಸರಿ ಕನಿಷ್ಠ ತಾಪಮಾನ 15-16 ಡಿಗ್ರಿಯಷ್ಟಿದೆ. ಕರಾವಳ ಜಿಲ್ಲೆಗಳಲ್ಲಿ ಬಿಟ್ಟರೆ ಮಲೆನಾಡು, ಬೆಂಗೂರು ಸುತ್ತಮುತ್ತಲ ಪ್ರದೇಶ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಿಪರೀತ ಚಳಿಯಿತ್ತು.

ಈ  ವಾರವೂ ಚಳಿಯ ವಾತಾವರಣ ಮುಂದುವರಿಯಲಿದೆ. ಆದರೆ ಕಳೆದ ವಾರಕ್ಕೆ ಹೋಲಿಸಿದರೆ ಕನಿಷ್ಠ ತಾಪಮಾನದಲ್ಲಿ ಕೊಂಚ ಏರಿಕೆಯಾಗಲಿದೆ. ಈ ವಾರ ಸರಾಸರಿ ಕನಿಷ್ಠ ತಾಪಮಾನ 16-17 ಡಿಗ್ರಿಯಷ್ಟಿರಲಿದೆ ಎಂದು ಹೇಳಲಾಗಿದೆ. ಆದರೂ ಒಂದೆರಡು ದಿನ ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣವಿರಲಿದೆ.

ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ವಾರದ ಮಧ್ಯೆ ತುಂತುರು ಮಳೆಯಾದರೂ ಅಚ್ಚರಿಯಿಲ್ಲ. ಬೆಂಗಳೂರಿನಲ್ಲೂ ಎರಡು ದಿನ ಸಂಪೂರ್ಣ ಮೋಡ ಕವಿದ ವಾತಾವರಣವಿರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿರಲಿದೆ. ಈ ವಾರ ಗರಿಷ್ಠ ತಾಪಮಾನ 26 ಡಿಗ್ರಿಯಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ