ಮಹಿಳೆಯೊಬ್ಬಳನ್ನ ನಿರಂತರವಾಗಿ ಕಾಡ್ತಿದ್ದ ಕೀಚಕ..!

ಗುರುವಾರ, 2 ಮಾರ್ಚ್ 2023 (18:22 IST)
ಆತನಿಗೆ ಕಂಡ ಕಂಡವರಿಗೆ ಬೈದುಕೊಂಡು ಓಡಾಡೋ ಖಯಾಲಿ.ಅದೊಬ್ಬಳು ಮಹಿಳೆಗೆ ಇನ್ನಿಲ್ಲದಂತೆ ಕಾಟ ಕೊಡ್ತಿದ್ದ.ಪ್ರತಿನಿತ್ಯ ಬಾರ್ ಬಳಿಗೆ ಬಂದು ಗಲಾಟೆ ಮಾಡ್ತಿದ್ದ.ಹೀಗಿದ್ದವನು ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಕೊಲೆಯಾಗಿ ಹೋಗಿದ್ದಾನೆ.ಕೊಲೆ ಮೂಲಕ ಮಹಿಳೆಗೆ ನ್ಯಾಯ ಕೊಡಲು ಹೋದ ಆಸಾಮಿಗಳು ಅಂದರ್ ಆಗಿದ್ದಾರೆ.ಇದು ಗೊರಗುಂಟೆಪಾಳ್ಯ ಬಳಿ ಇರೋ ಶ್ರೀ ಸೊಣ್ಣಪ್ಪ ಮುಖ್ಯರಸ್ತೆ.ಇದೇ ರಸ್ತೆಯಲ್ಲಿ ಘನಘೋರವೇ ನಡೆದುಹೋಗಿದೆ.ರಾತ್ರೋ ರಾತ್ರಿ ಬಂದ ಹಂತಕರು ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಎತ್ಹಾಕಿ ಕೊಲೆ ಮಾಡಿದ್ದಾರೆ.

ಈ ಫೋಟೋದಲ್ಲಿ ಕಾಣ್ತಿರೊ ಯುವಕನ ಹೆಸರು ಶಿವಕುಮಾರ್ ಅಲಿಯಾಸ್ ಜೋಗಿ.ಇನ್ನೂ ಈ ಹಂತಕರ ಹೆಸರು ಕರ್ಣ ಮತ್ತು ಗಿರೀಶ್.ಶಿವಕುಮಾರ್ ಆರ್.ಎಂ.ಸಿ.ಮಾರ್ಕೆಟ್ ನಲ್ಲಿ ಈರುಳ್ಳಿ ಹರಾಜು ಕೂಗೊ ಕೆಲಸ ಮಾಡ್ತಿದ್ದ.ಆದ್ರೆ ವಿಪರೀತ ಕುಡಿಯೋ ಹುಚ್ಚು.ಪರಮಾತ್ಮ ಹೊಟ್ಟೆಯೊಳಗೆ ಬಿದ್ದರೆ ಸಾಕು.ಕಂಡ ಕಂಡವರನ್ನ ಬೈಯೋದೆ ಈತನ ಖಯಾಲಿಯಾಗಿಬಿಟ್ಟಿತ್ತು.ಇಷ್ಟಾಗಿದ್ದಿದ್ರೆ ಓಕೆ ಆದರೆ ತರಕಾರಿ ಮಾರ್ತಿದ್ದ ಮಹಿಳೆಗೆ ಇನ್ನಿಲ್ಲದ್ದಂತೆ ಕಾಟ ಕೊಡ್ತಿದ್ದ.ತರಕಾರಿ ಬೀಸಾಡಿ ಕಾಡ್ತಿದ್ದ.ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.ಆದರೆ ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ರು

ಹೀಗಿರ್ಬೇಕಾದ್ರೆ ಮತ್ತೆ ಅದೇ ಚಾಳಿ ಮುಂದುವರೆಸಿದ್ದ ಶಿವಕುಮಾರ್ ಮಹಿಳೆಗೆ ಬೈಯೋದು ಮಾಡ್ತಿದ್ದ.ವಿಚಾರವನ್ನು ಪರಿಚಯಸ್ಥರಾದ ಕರ್ಣ ಮತ್ತು ಗಿರೀಶ್ ಗೆ ಹೇಳಿಕೊಂಡಿದ್ದಾಳೆ.ಎಂದಿನಂತೆ ನಿನ್ನೆ ಕೂಡ ಶಿವಕುಮಾರ್ ಗೊರಗುಂಟೆಪಾಳ್ಯ ಬಳಿಯ ಇದೇ ಶೇಖರ್ ಬಾರ್ ಬಳಿ ಕುಡಿಯಲು ಬಂದಿದ್ದ.ಅಲ್ಲಿಗೆ ಬಂದಿದ್ದ ಕರ್ಣ ಮತ್ತು ಗಿರೀಶ್ ಶಿವಕುಮಾರ್ ನನ್ನ ಪ್ರಶ್ನೆ ಮಾಡಿದ್ದಾರೆ.ಇದೆಲ್ಲ ಬಿಟ್ಟು ಸುಮ್ಮನಾಗ್ಬಿಡು ಅಂತೆಲ್ಲ ಹೇಳಿದ್ದಾರೆ.ಆದರೆ ಅಲ್ಲೂ ಜಗಳಕ್ಕೆ ಬಿದ್ದ ಶಿವಕುಮಾರ್ ನನ್ನ ಮುಗಿಸಿಬಿಡೋಣ ಅನ್ನೋ ನಿರ್ಧಾರಕ್ಕೆ ಬಂದುಬಿಟ್ಟಿದ್ದರು.ನಿನ್ನೆ ರಾತ್ರಿ‌ 12 ಗಂಟೆಗೆ ಬಾರ್ ನಿಂದ 300 ಮೀಟರ್ ದೂರ ಇರೋ ಜಾಗಕ್ಕೆ ಕರೆದುಕೊಂಡು ಹೋಗಿದ್ದು ತಲೆ ಮೇಲೆ ಕಲ್ಲೆತ್ಹಾಕಿ ಕೊಲೆ ಮಾಡಿದ್ದಾರೆ.ಘಟನೆ ಸಂಬಂಧ ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.ತನಿಖೆಗೆ ಇಳಿದ ಪೊಲೀಸರು ಆರೋಪಿಗಳಾ ಕರ್ಣ ಮತ್ತು ಗಿರೀಶ್ ನನ್ನ ಬಂಧಿಸಿದ್ದು,ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ