ಉದ್ಯಮಿ ಮನೆಯೊಂದನ್ನ ದೋಚಿದ ಖತರ್ನಾಕ್ ಗ್ಯಾಂಗ್

ಭಾನುವಾರ, 12 ಮಾರ್ಚ್ 2023 (16:59 IST)
ಉದ್ಯಮಿ ಮನೆಯನ್ನು ದೋಚಿದ್ದ ಖತರ್ನಾಕ್ ಒರಿಸ್ಸಾ ಗ್ಯಾಂಗ್  ಒಂದನ್ನು  ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡಿಕೊಂಡು ಒರಿಸ್ಸಾದಲ್ಲಿ ಮನೆ ಕಟ್ಟಿಸುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಲ್ಲಿಕ್, ಭಕ್ತ ಹರಿ‌ ಮಲ್ಲಿಕ್ ಹಾಗೂ ನಬೀನ್ ಸುನಾರಿ ಈ ಮೂವರು ಕೋರಮಂಗಲದ 3ನೇ ಬ್ಲಾಕ್ ನ ಉದ್ಯಮಿ ಮನೆಯನ್ನು ಪಕ್ಕಾ ಪ್ಲ್ಯಾನ್ ಮಾಡಿ ದೋಚಿದ್ದರು.ಮನೆಯಲ್ಲಿದ್ದ ಡೈಮೆಂಡ್, ಚಿನ್ನಾಭರಣ, ಬೆಳ್ಳಿ ನಾಣ್ಯಗಳು, 3 ಲಕ್ಷ ಮೌಲ್ಯದ ಒಮೇಗಾ ವಾಚ್ ಕಳವು,ಲ್ಯಾಪ್ ಟ್ಯಾಪ್, ಕ್ಯಾಮರಾ ಹಾಗೂ ಟ್ಯಾಪ್ ಕೂಡ ದೋಚಿ ಪರಾರಿಯಾಗಿದ್ದರು.ಸುಮಾರು 70 ಲಕ್ಷದ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಉದ್ಯಮಿಯ ಇಡೀ ಕುಟುಂಬ ಹೊರರಾಜ್ಯಕ್ಕೆ ಟ್ರಿಪ್ ಹೋಗಿದ್ದರು ಆದ್ರೆ ಮನೆಗೆ ಯಾವುದೇ ಸೆಕ್ಯುರಿಟಿ ಗಾರ್ಡ್ ಹಾಗೂ ಸಿಸಿ ಕ್ಯಾಮರಾ ಇರಲಿಲ್ಲ.ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಮನೆಯನ್ನು ದೋಚಿದ್ದಾರೆ.
 ರಸ್ತೆಯಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಒರಿಸ್ಸಾದಲ್ಲಿ ಆರೋಪಿಗಳ ಬಂಧಲಿದ್ದಾರೆ.
 
ಈ ಲಾಸ್ಟ್ ನಲ್ಲಿ ದಾಖಲಾಗಿದ್ದ ದೂರುಗಳನ್ನ ಸಿಸಿಬಿ  ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತ್ತಿಚೆಗೆ ಜಾಸ್ತಿಯಾಗಿದ್ದ ಮೊಬೈಲ್ ಕಳ್ಳತನ ಹಾಗೂ ಮಿಸ್ಸಿಂಗ್ ಪ್ರಕರಣಗಳ ಮೇಲೆ ಕಣ್ಣು ಹಾಕಿದ್ದ ಪೊಲೀಸರು ಈ ಲಾಸ್ಟ್ ನಲ್ಲಿ ದೂರು ದಾಖಲಿಸಿದ್ದ ಮೊಬೈಲ್ ಕಳೆದು ಕೊಂಡವರು ಮತ್ತು ಸಿಇಐಆರ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಅಗಿದ್ದಾಗ ಮೊಬೈಲ್ ಆನ್ ಅದ್ರೆ ಅಲರ್ಟ್ ಬರುತ್ತೆ ,ಸಿಇಐಆರ್ ಪೊರ್ಟಲ್ ಮೂಲಕ ಸಾಕಷ್ಟು ಮೊಬೈಲ್ ಪತ್ತೆಯಾಗುತ್ತಿದೆ. ಮೊಬೈಲ್ ಕದ್ದು ಕಡಿಮೆ ಬೆಲೆಗೆ ಸೇಲ್ ಅಗಿದ್ದ ಮೊಬೈಲ್ ಗಳನ್ನು ಅ ಎಲ್ಲಾ ಮೊಬೈಲ್ ಗಳನ್ನ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು 112 ಮೊಬೈಲ್ ಗಳನ್ನ ಪತ್ತೆ ಹಚ್ಚಿ ಅದರ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.ಒಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ಖದೀಮರ ಹೆಡೆಮುರಿ‌ ಕಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ