ಯೋಗಸೆಂಟರ್ ಗಾಗಿ ಮರಗಳ ಮಾರಣಹೋಮ!

ಸೋಮವಾರ, 15 ಆಗಸ್ಟ್ 2022 (15:16 IST)
ರಾಜಧಾನಿಯ ಆ ಕೆರೆಯನ್ನ ಈಗಾಗಲೇ ಒತ್ತುವರಿ ಮಾಡಿಕೊಂಡು, ಕೆರೆಯ ಜಾಗವೇ ಇಲ್ಲದಂತೆ ಮಾಡಲಾಗಿದೆ. ಇನ್ನು ಆ ಕೆರೆ ಜಾಗದ ಒಳಗೆ ಬಿಬಿಎಂಪಿ ಯೋಗಸೆಂಟರ್ ಮಾಡಲು ಹೊರಟಿದದ್ದು, 15 ಕ್ಕೂ ಹೆಚ್ಚು ಮರಗಳನ್ನ ಕಡಿಯಲಾಗಿದೆ. ಕೆರೆಯ ಜಾಗದಲ್ಲಿ ಯಾಕಪ್ಪಾ ಯೋಗಸೆಂಟರ್ ಅಂತಾ ಅಲ್ಲಿನ ಸ್ಥಳೀಯರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

 ಕೆರೆ ಒಳಗಿನ ಜಾಗದಲ್ಲಿ ಯೋಗಸೆಂಟರ್ ನಿರ್ಮಾಣ ಮಾಡ್ಬೇಕು ಅಂತಾ ಹೀಗಡ ಮರಗಳನ್ನು ಕಡಿದು ಹಾಕಿ, ಜಾಗ ಮಾರ್ಕ್ ಮಾಡಿ ಹೋಗಲಾಗಿದೆ.‌ ಇದು ಈಗ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಕರೆಯನ್ನು ಈಗಾಗಲೇ ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಇದೆ. ಹೀಗಾಗೀ ಕೆರೆ ಜಾಗ ಕ್ಷೀಣಿಸಿದ್ದು, ಪಕ್ಷಿ-ಪ್ರಾಣಿ ಸಂಕುಲ ನಾಶವಾಗಿದೆ. ಇದ್ರ ನಡುವೆ ಈಗ ಪಾಲಿಕೆ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದು, ಕೆರೆ ಜಾಗದಲ್ಲಿ ಯೋಗಸೆಂಟರ್ ನಿರ್ಮಾಣ ಮಾಡೋಕೆ ಹೊರಟಿದೆ. ಈ ಕೆರೆಯ ಜಾಗದಲ್ಲಿ ವಾಕಿಂಗ್ ಮಾಡಿದ್ರೆ ಸಾಕು,, ಅದೇ ಯೋಗ ಆಗುತ್ತೆ. ಮತ್ಯಾಕೆ ಯೋಗಸೆಂಟರ್ ಬೇಕು ಅನ್ನೋದು ಸ್ಥಳೀಯರ ಆಕ್ಷೇಪ. ಇನ್ನು ಒಂದು ಮರ ಬೆಳೆಸೋದು ಎಷ್ಟು ಕಷ್ಟ. ಅಂತದ್ರಲ್ಲಿ ಸ್ಥಳೀಯರು ಬಹುದಿನಗಳಿಂದ ಬೆಳೆಸಿರೋ ಮರಗಳನ್ನು ಜೆಸಿಬಿ ತಂದು ಕ್ಷಣಾರ್ಧದಲ್ಲಿ ನಾಶ ಮಾಡ್ತಾರೆ ಅಂದ್ರೆ ಇವರಿಗೆ ಏನ್ ಹೇಳ್ಬೇಕು ಅಂತಾ ಸ್ಥಳೀಯರು ಕಿಡಿಕಾರುತ್ತಿದ್ದಾರೆ.‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ