ಮತ್ತೆ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿದ ಜಿ.ಪರಮೇಶ್ವರ್

ಶುಕ್ರವಾರ, 29 ಏಪ್ರಿಲ್ 2016 (16:41 IST)
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತೆ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
 
ದಲಿತ ಮುಖ್ಯಮಂತ್ರಿ ವಿಚಾರ ಕುರಿತಂತೆ ಮುಜುಗರವಾಗುತ್ತದೆ ಎಂದು ನಾನು ಮೌನವಾಗಿರಬಹುದು. ಆದರೆ, ಬೇರೆಯವರು ಸುಮ್ಮನಿರಲ್ಲ ಹೋರಾಟ ಮುಂದುವರಿಸುತ್ತಾರೆ ಎಂದು ತಿಳಿಸಿದ್ದಾರೆ.
 
ದಲಿತ ಸಿಎಂ ಹೋರಾಟ ಅನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಕೂಗಿಗೆ ಹೈಕಮಾಂಡ್ ಸ್ಪಂದಿಸುತ್ತಿಲ್ಲ ಎನ್ನುವ ಭಾವನೆ ನಮ್ಮಲ್ಲಿಲ್ಲ. ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ. ಹೈಕಮಾಂಡ್ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

 
ಮಲ್ಲಿಕಾರ್ಜುನ್ ಖರ್ಗೆ ಅಥವಾ ವಿ.ಶ್ರೀನಿವಾಸ್ ಪ್ರಸಾದ್ ಯಾರಾದರೂ ಆಗಬಹುದು. ಒಟ್ಟು ದಲಿತ ನಾಯಕ ಮುಖ್ಯಮಂತ್ರಿಯಾಗಬೇಕು ಎನ್ನುವುದೇ ದಲಿತ ಸಮುದಾಯದ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ.
 
ಮುಖ್ಯಮಂತ್ರಿಗಳ ಬದಲಾವಣೆಯಾಗಲಿದೆ ಎನ್ನುವ ವರದಿಗಳ ಮಧ್ಯೆ ದಲಿತ ಸಿಎಂ ವಿಚಾರವನ್ನು ಜಿ.ಪರಮೇಶ್ವರ್ ಪ್ರಸ್ತಾಪಿಸಿರುವುದು 
 
ಹಿಂದುಳಿದವರ ಪಟ್ಟಿಯಿಂದ ನಾವು ಹೊರಬರೋದ್ಯಾವಾಗ? ಮುಂದುವರಿದವರ ಪಟ್ಟಿಯಲ್ಲಿ ಸೇರೋದು ಯಾವಾಗ? ದಲಿತ ಸಿಎಂ ಆದರೆ ಭಾರಿ ಪರಿವರ್ತನೆಯಾಗುತ್ತದೆ ಎಂದು ನಾವು ನಿರೀಕ್ಷಿಸಿಲ್ಲ. ಆದರೆ, ನಮಗೂ ಅಡಳಿತ ಮಾಡಲು ಬರುತ್ತದೆ ಎನ್ನುವುದಕ್ಕೆ ಸಾಕ್ಷಿ ದೊರೆತಂತಾಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ