ಕರ್ನಾಟಕ ಸಾರಿಗೆ ಸಂಸ್ಥೆಯ ಅಂತರ್ ನಿಗಮ ವರ್ಗಾವಣೆ ಸಂಭವನೀಯ ಪಟ್ಟಿ ಪ್ರಕಟ
ಬೆಂಗಳೂರು: ಬೆಂ.ಮ.ಸಾ.ಸಂಸ್ಥೆ, ಕ.ಕ.ರ.ಸಾ.ಸಂಸ್ಥೆ ಮತ್ತು ವಾ.ಕ.ರ.ಸಾ. ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ 4 ರ ನೌಕರರು ಅಂತರ ನಿಗಮ ವರ್ಗಾವಣೆಗೆ
ಸಲ್ಲಿಸಿರುವ ಅರ್ಜಿಗಳನ್ನು ಸರ್ಕಾರದ ಆದೇಶದಂತೆ ವಿಲೇವಾರಿ ಮಾಡಲಾಗುತ್ತದೆ. ಪರಿಶೀಲಿಸಿ ತಯಾರಿಸಿರುವ ಅರ್ಹ ನೌಕರರ ಸಂಭವನೀಯ ವರ್ಗಾವಣೆ ಪಟ್ಟಿಯನ್ನು ನಿಗಮದ ವೆಬ್ ಸೈಟ್ ksrtc.karnataka.gov.in ಇಂದು ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಸಂಭವನೀಯ ವರ್ಗಾವಣೆ ಪಟ್ಟಿಗೆ ಸಂಬಂಧಿಸಿದಂತೆ ಅರ್ಜಿದಾರ ನೌಕರರು ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಅವುಗಳನ್ನು ನೇರವಾಗಿ ತಮ್ಮ ವಿಭಾಗದ ಆಡಳಿತಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಲು ಆಗಸ್ಟ್ 20 ರಿಂದ ಹಾಗೂ ಆಗಸ್ಟ್ 21 ರ ಸಂಜೆ 05:30 ರೊಳಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ ಬಂದ ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ. ನೇರವಾಗಿ ನಿಗಮದ ಕೇಂದ್ರ ಕಛೇರಿಗೆ ಸಲ್ಲಿಸುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಕ.ರಾ.ರ.ಸಾ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.