KSRTCಯ 7200 ಸಿಬ್ಬಂದಿ ಮೇಲಿನ‌ ಪ್ರಕರಣ ಮನ್ನಾ

ಭಾನುವಾರ, 1 ಮೇ 2022 (18:20 IST)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ ಮಾಡಲಾಗಿದೆ.ಹತ್ತು ತಿಂಗಳುಗಳ ಅವಗಿಂತ ಕಡಿಮೆ ಅವಧಿ ಒಳಗಿನ ಗೈರುಹಾಜರಿಯನ್ನು ಮನ್ನಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ ವಿಚಾರಣೆಯನ್ನು ರದ್ದುಗೊಳಿಸಿ, ಬಸ್ಸನ್ನು ನೀಡಿ ಚಾಲನೆಗೆ ಅನುವು ಮಾಡಿಕೊಡಲಾಗಿದೆ. ಅದರಂತೆ ಗೈರುಹಾಜರಾಗಿದ್ದ 110 ನೌಕರರು ಕಳೆದ ಮೂರು ದಿನಗಳಿಂದ ಕರ್ತವ್ಯ ಹಾಜರಾಗಿದ್ದಾರೆ.
 
ನಿಗಮದಲ್ಲಿ 35 ಸಾವಿರ ಸಿಬ್ಬಂದಿ ಇದ್ದು, 8414 ಶಿಸ್ತು ಪ್ರಕರಣಗಳಿವೆ. ಕಲೆದ ಮೂರು ದಿನಗಳಿಂದ 7200 ಶಿಸ್ತು ಪ್ರಕರಣಗಳನ್ನು ಅತಿ ಕಡಿಮೆ ಮೊತ್ತದ ದಂಡ ವಿಧಿಸಿದ್ದು, ಅಂದರೆ 100, 200, 500 ರೂ. ಅನ್ನು ದಂಡ ವಿಧಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ