ಮೈತ್ರಿಯಲ್ಲಿ ಬಿರುಕು?: ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ತೊಲಗಲಿ ಎಂದ ಮಾಜಿ ಸಿಎಂ
ಶನಿವಾರ, 29 ಜೂನ್ 2019 (17:20 IST)
ಹದಿಮೂರೇ ತಿಂಗಳಲ್ಲಿ ರಾಜ್ಯದಲ್ಲಿ ಮತ್ತೆ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಆಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಲಿ. ಹೀಗಂತ ಮಾಜಿ ಸಿಎಂ ಹರಿಹಾಯ್ದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರಬೇಕಿತ್ತು.103 ಶಾಸಕರ ಬದಲಿಗೆ 115 ಶಾಸಕರು ಇದ್ದಿದ್ದರೆ ಕೇಂದ್ರದಲ್ಲಿ ಮೋದಿ ಸರ್ಕಾರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇರುತ್ತಿತ್ತು. ಈ ಬಗ್ಗೆ ರಾಜ್ಯದ ಜನರಿಗೆ ಕೊರಗಿದೆ. ಓಟು ಬಿಜೆಪಿಗೆ ಕೆಲಸ ಮಾಡಿ ಅಂತ ನಮ್ಮನ್ನು ಕೇಳ್ತೀರಾ ಅಂತಾ ಸೊಕ್ಕಿನ, ಧಿಮಾಕಿನ ಮಾತು ಸಿಎಂ ಹೇಳಿದ್ದಾರೆ.
ಅವರಿಗೆ ಜನರು ಸರಿಯಾದ ಪಾಠ ಕಲಿಸುತ್ತಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಕುಡಿಯುವ ನೀರಿಗೆ ಹಾಹಾಕಾರ ಇದೆ. ಈ ಸಂದರ್ಭದಲ್ಲಿ ವಿದೇಶ ಪ್ರವಾಸ ಮಾಡುತ್ತೀರಾ? ಈ ಸಂದರ್ಭದಲ್ಲಿ ನೀವು ರಾಜ್ಯದ ಉದ್ದಗಲಕ್ಕೇ ಓಡಾಟ ಮಾಡಬೇಕಿತ್ತು ಅಂತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗರಂ ಆದರು.
ಕರ್ನಾಟಕದಲ್ಲಿ ದುರಹಂಕಾರ, ತುಘಲಕ್ ಸರ್ಕಾರ ನಡೆಯುತ್ತಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಈ ಸರ್ಕಾರ ಬೀಳಬಹುದು. ನಾವಾಗಿಯೇ ಯಾವುದೇ ಎಂಎಲ್ ಎ ಯನ್ನು ಕರೆಯಲ್ಲ. ಅವರಾಗಿಯೇ ರಾಜೀನಾಮೆ ಕೊಟ್ಟು ಬಂದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಹದಿಮೂರೇ ತಿಂಗಳಲ್ಲಿ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆಡಳಿತ ನಡೆಸಲು ನಿಮಗೆ ಆಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಎಂದು ಸಿಎಂಗೆ ಟಾಂಗ್ ನೀಡಿದ್ರು.