ಖಾಸಗಿ ವೈದ್ಯರನ್ನು ನಿಮ್ಮ ಗುಲಾಮರು ಅಂದುಕೊಡಿದ್ದೀರಾ?: ಕುಮಾರಸ್ವಾಮಿ ಕಿಡಿ

ಶುಕ್ರವಾರ, 3 ನವೆಂಬರ್ 2017 (14:06 IST)
ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ಧ ಮನಬಂದಂತೆ ಹೇಳಿಕೆ ನೀಡುವ ಸಚಿವ ರಮೇಶ್ ಕುಮಾರ್ ವೈದ್ಯರನ್ನು ತಮ್ಮ ಮನೆಯ ಗುಲಾಮರು ಅಂದುಕೊಡಿದ್ದಾರಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಿ ಒಳ್ಳೆಯ ಚಿಕಿತ್ಸೆ ದೊರೆಯುತ್ತದೆ. ಖಾಸಗಿ ಆಸ್ಪತ್ರೆಗಳ ಬದಲಿಗೆ ಸರಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದರೆ ಜನತೆ ಯಾಕೆ ಖಾಸಗಿ ಆಸ್ಪತ್ರೆಗೆ ಹೋಗ್ತಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಕುಮಾರಸ್ವಾಮಿ, ಎಲ್ಲಾ ವೈದ್ಯರು ಕೆಟ್ಟವರಿರುವುದಿಲ್ಲ. ಇದು ಸಿಎಂ ಸಿದ್ದರಾಮಯ್ಯ ಹುಚ್ಚುತನದ ಪರಮಾವಧಿಯಾಗಿದೆ. ಯಾವುದೇ ಮಸೂದೆ ಜಾರಿಗೆ ತರುವ ಮುನ್ನ ಜನತೆ ಬಳಿ ತೆರಳಿ ವಿಚಾರಿಸಿ, ನಂತರ ತೀರ್ಮಾನ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.
 
ರಮೇಶ್ ಕುಮಾರ್ ಬರೀ ಸಂತೆ ಭಾಷಣಾ ಮಾಡ್ತಾರೆ. ಅವರು ಬಳಸುವ ಭಾಷೆಯನ್ನು ಕೂಡಾ ಗಮನಿಸಿದ್ದೇನೆ. ರಾಜ್ಯದಾದ್ಯಂತ ಖಾಸಗಿ ವೈದ್ಯರು ಮುಷ್ಕರ ನಡೆಸುತ್ತಿದ್ದರೂ ನನಗೆ ಗೊತ್ತೆ ಇಲ್ಲ ಎಂದು ಹೇಳಿವುದು ನಾಚಿಕೆಗೇಡಿತನದ ಸಂಗತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ