ಸಚಿವ ಸ್ಥಾನ ಸಿಗದಿದ್ದಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಅಸಮಾಧಾನ

ಶುಕ್ರವಾರ, 8 ಜೂನ್ 2018 (15:39 IST)
ಸಚಿವೆ ಆಗಬೇಕು ಅಂತ ಬಹಳಷ್ಟು ಆಸೆ ಇಟ್ಕೊಂಡಿದ್ದೆ. ನನಗೆ ಭರವಸೆಯನ್ನು ಕೊಟ್ಟಿದ್ರು. ಆದ್ರೆ ಒಂದೇ ಒಂದು ಬೇಸರ ಅಂದ್ರೆ ಏನು ಕೆಟಗಿರಿ ಏನು ಮಾನದಂಡ' ಅನ್ನೊದು ಗೊತ್ತಾಗ್ಲಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಹಿರಿಯರು ಒಮ್ಮೆ ಒಂಥರ ಇನ್ನೊಮ್ಮೆ ಮತ್ತೊಂತರ ಹೇಳಿದ್ರು. ಹೋದ ಸಾರಿ ಎಂಎಲ್ಸಿಗಳನ್ನ ಮಾಡಲ್ಲ ಅಂತ ಮೋಟಮ್ಮನವರಿಗೆ ಸಚಿವ ಸ್ಥಾನ ಕೊಡಲಿಲ್ಲ. ಆದ್ರೆ ಈ ಸಾರಿ ಎಂಎಲ್ಸಿಯನ್ನ ಮಂತ್ರಿ ಮಾಡಿದಾರೆ. ನಾನು ಜಯಮಾಲಾ ಜೊತೆ ಅನ್ನೊನ್ಯವಾಗಿದಿನಿ‌. ಕಾಂಗ್ರೆಸ್ ಪಕ್ಷದಲ್ಲಿ ಯಾರು ರೂಲ್ಸ್ ಮಾಡ್ತಾರೆ.. ಯಾರು ರೂಲ್ಸ್ ಮುರಿತಾರೆ ಅನ್ನೋದೆ ನಿಜವಾಗಿಯೂ ನನಗೆ ಯಕ್ಷಪ್ರಶ್ನೆ ಆಗಿದೆ ಎಂದರು.
 
ಸಚಿವೆಯಾಗಲು ಏನು ಮಾನದಂಡ ಅನ್ನೊದು ನನಗೆ ಬಹಳಷ್ಟು ಕನಫ್ಯೂಷನ್ ಆಗಿದೆ. ಇದರ ಹಿಂದೆ ಕಾಣುವ ಕೈಗಳು, ಕಾಣದ ಕೈಗಳು ಕೆಲಸ ಮಾಡಿವೆ. ಪಕ್ಷದ ಸಭೆ ನಡೆದಾಗ ನನಗಾದ ಅನ್ಯಾಯದ ಬಗ್ಗೆ ಖಂಡಿತ ಧ್ವನಿ ಎತ್ತುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ