ಕೈ ಪಡೆಯ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತೆ ಸುದ್ದಿಗೆ ಬಂದಿದ್ದಾರೆ.
ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ದಯಾಳುಗಳು ಆಗಬೇಕು.
ರೈತರು ಎಸ್ ಟಿಪಿ ಘಟಕಕ್ಕೆ ಭೂಮಿ ಕೊಡುವ ಸ್ಥಿತಿಯಲ್ಲಿ ಇಲ್ಲ. ಘಟಕಕ್ಕೆ19 ಎಕರೆ ಭೂಮಿ ಬೇಕಾಗಿಲ್ಲ ನನ್ನ ಪ್ರಕಾರ ಅಂತ ಹೇಳಿದ್ದಾರೆ.
ಪರಿಹಾರ ಎಷ್ಟೇ ಆದರೂ ರೈತರ ಮನವೊಲಿಸಿ ಭೂಮಿ ಪಡೆಯಬೇಕು. ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ. ಆದರೆ ರೈತರಿಗೆ ಅನ್ಯಾಯ ಮಾಡಲು ಬಿಡಲ್ಲ ಎಂದಿದ್ದಾರೆ. ಫಲವತ್ತಾದ ಭೂಮಿ ವಶಕ್ಕೆ ಮುಂದಾಗಿದ್ದು ಯಾಕೆ? ರೈತರ ಭವಿಷ್ಯದ ಬಗ್ಗೆ ಯಾರು ಚಿಂತಿಸಿಲ್ಲ ಎಂದು ದೂರಿದ್ದಾರೆ.
ಯಾರಾದರೂ ಆತ್ಮಹತ್ಯೆ ಮಾಡಿಕೊಂಡ್ರೂ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ದಯಮಾಡಿ ರೈತರ ವಿಚಾರದಲ್ಲಿ ಚೆಲ್ಲಾಟ ಬೇಡ. ಎಲ್ಲರನ್ನು ಮನವೊಲಿಸಿ ಕೆಲಸ ಮಾಡಿದ್ರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ರೈತರು, ಜಿಲ್ಲಾಡಳಿತ ಮನವೊಲಿಸಲು ಯತ್ನ ನಡೆಯುತ್ತಿದೆ. ಪರಿಹಾರ ಧನ ಹೆಚ್ಚಿನ ಹಣ ಕೊಡಬೇಕು ಅಂತ
ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.