ಕೃಷ್ಣಾ ನದಿ ಹರಿವು ಹೆಚ್ಚಳ: ಚಿಕ್ಕಪಡಸಲಗಿ ಬ್ಯಾರೆಜ್ ನಲ್ಲಿ ಭೂಕುಸಿತ
ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ,ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್ ಭೂ
ಕುಸಿತ ವಾಗುತ್ತಿದೆ.
ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಕೊಯ್ನಾ ಜಲಾಶಯ ದಿಂದ ಕೃಷ್ಣ ನದಿಗೆ 3.50 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.ಈ ಹಿನ್ನಲೆ ಚಿಕ್ಕ ಪಡಸಲಗಿ ಬ್ಯಾರೇಜ್ ಬಳಿ ನಿರ್ಮಾಣ ಮಾಡಿರುವ ಶ್ರಮ ಬಿಂದು ಸಾಗರ ಬಳಿ ಭೂ ಕೊರತೆ ಉಂಟಾಗುತ್ತಿದೆ.ಈ ಬಗ್ಗೆ ಗಮನ ಹರಿಸಿದ ಶಾಸಕ ಆನಂದ ನ್ಯಾಮಗೌಡ ಅವರು ಭೇಟಿ ನೀಡಿ,ಪರಿಶೀಲನೆ ನಡೆಸಿದರು.
ಕುಸಿತ ತಡೆಗಟ್ಟಲು, ಲಾರಿ ಮೂಲಕ ಕಲ್ಲು ಹಾಗೂ ಗಟ್ಟಿಯಾದ ಮಣ್ಣು ಹಾಕುವ ಕೆಲಸ ನಡೆಯುತ್ತಿದೆ.ಜೆಸಿಬಿಯಿಂದ ನದಿಯ ದಡದಲ್ಲಿ ಉಂಟಾಗುತ್ತಿರುವ ಭೂ ಕೊರೆತೆ ವನ್ನು ಸರಿಮಾಡಲು, ಲಾರಿ ಮೂಲಕ ಕಲ್ಲು,ಮಣ್ಣು ತಂದು ಸುರಿಯುವ ಮೂಲಕ ಸಮತಟ್ಟನೆ ಮಾಡುತ್ತಿದ್ದಾರೆ. ಈಗಾಗಲೇ ರೈತರು ನಿರ್ಮಾಣ ಮಾಡಿದ್ದ ಚಿಕ್ಕ ಬ್ಯಾರೇಜ್ ಶ್ರಮ ಬಿಂದು ಸಾಗರ ಸಂಪೂರ್ಣ ಮುಳಗಡೆ ಆಗಿದೆ.