ಸೋರುತ್ತಿದೆ ಸರ್ಕಾರಿ ಶಾಲೆ ಮೇಲ್ಛಾವಣಿ

ಮಂಗಳವಾರ, 11 ಜುಲೈ 2023 (14:40 IST)
ಶಿವಮೊಗ್ಗ-ಹೊಸನಗರ ಮುಖ್ಯ ರಸ್ತೆಯಲ್ಲಿರುವ ಕೋಡೂರು ಸರ್ಕಾರಿ ಶಾಲೆ ಮೇಲ್ಚಾವಣಿ ಶಿಥಿಲವಾಗಿದ್ದು, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ವಿದ್ಯಾರ್ಥಿಗಳು ಶಾಲಾ ತರಗತಿ ಕೊಠಡಿಯಲ್ಲಿ ಛತ್ರಿ ಹಿಡಿದು ಪಾಠ ಪ್ರವಚನ ಕೇಳುವ ಸ್ಥಿತಿ ಎದುರಾಗಿದೆ. ಇಲ್ಲಿ ಸುಮಾರು 125 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿ 6 ಜನ ಶಿಕ್ಷಕರು, ದ್ವಿತೀಯ ದರ್ಜೆ ಓರ್ವ ಡಿ ಗ್ರೂಪ್ ನೌಕರ ವರ್ಗದವರಿದ್ದಾರೆ.. 2022-23ನೇ ಸಾಲಿನ SSLC ಪಬ್ಲಿಕ್ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಶೇಕಡಾ 86 ರಷ್ಟು ಫಲಿತಾಂಶ ಪಡೆದಿದೆ. ಆದರೆ, ಈ ಪ್ರೌಢಶಾಲೆಯ ದುರಾವಸ್ಥೆ ಹೇಳತೀರದಾಗಿದೆ. ಶಾಲಾ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು ಮಳೆಯಲ್ಲಿ ಛತ್ರಿ ಹಿಡಿದು, ನೀರಿನಲ್ಲೇ ಪಾಠ ಕೇಳುವಂತಾಗಿದೆ. ಈ ಬಗ್ಗೆ ಶಾಲಾ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಕೂಡಾ ಗಮನಹರಿಸದೇ ಇರುವುದೇ ಈ ದುರಾವಸ್ಥೆಗೆ ಕಾರಣ ಎನ್ನಲಾಗುತ್ತಿದೆ. ಇನಾದ್ರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಾರ ಎಂಬುದನ್ನ ಕಾದುನೋಡಬೇಕಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ