ಮೈಸೂರಿನಲ್ಲಿ ಚಿರತೆ ದಾಳಿ, ಹಸು ಸಾವು

ಶುಕ್ರವಾರ, 25 ಆಗಸ್ಟ್ 2023 (16:00 IST)
ಚಿರತೆ ದಾಳಿ ಮಾಡಿ ಹಸು ಸಾವನ್ನಪಿರುವ ಘಟನೆ ಮೈಸೂರಿನ ಸಾಲಿಗ್ರಾಮ ತಾಲ್ಲೂಕಿನ ಕಾವಲ್ ಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಜೇಶ್ವರಿ ಪ್ರಸನ್ನ ಎಂಬುವರಿಗೆ ಹಸು ಸೇರಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ ಹಸುವನ್ನು ಚಿರತೆ ಎಳೆದುಕೊಂಡು ಹೋಗಿದೆ. ಕಾವಲು ಅರಣ್ಯ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಕಾವಲು ಹೊಸೂರು ಚಿಕ್ಕಭೇರ್ಯ ಸಂಭ್ರವಳ್ಳಿ ಹೊಸಾಗ್ರಹಾರ ಗುಳುವಿನ ಅತ್ತಿಗುಪ್ಪೆ ಗ್ರಾಮಗಳಲ್ಲಿ ಚಿರತೆ ಭೀತಿ ಹೆಚ್ಚಾಗಿದ್ದು, ಕುರಿಗಳು ಮತ್ತು ನಾಯಿ ಹಾಗೂ ಹಸುಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಹೊಸೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನ್ ಅಳವಡಿಸುವಂತೆ ಜನರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ