ದಾವಣಗೆರೆ ರಾಜಧಾನಿಯಾಗಲಿ ಎಂದ ಪಾಪು

ಸೋಮವಾರ, 24 ಡಿಸೆಂಬರ್ 2018 (17:42 IST)
ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ಎಲ್ಲಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಮಧ್ಯ ಕರ್ನಾಟಕದ ದಾವಣಗೆರೆ ರಾಜ್ಯದ ರಾಜಧಾನಿಯಾಗಬೇಕು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹಕ್ಕೋತ್ತಾಯ ಮಂಡಿಸಿದರು.

ಧಾರವಾಡ ನಗರದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ  ಶಿವಕುಮಾರಸ್ವಾಮೀಜಿ ಜನಕಲ್ಯಾಣ ಪ್ರತಿಷ್ಠಾನ, ಕುರ್ಕಿ, ಗ್ರಂಥ ಸರಸ್ವತಿ ಪ್ರತಿಭಾರಂಗ, ದಾವಣಗೆರೆ ಇವರ ಸಹಯೋಗದಲ್ಲಿ  ಹಮ್ಮಿಕೊಂಡಿದ್ದ ಗ್ರಂಥ ಸರಸ್ವತಿ ಕನ್ನಡ ನುಡಿಜಾಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ದಾವಣಗೆರೆಯ ಜನತೆ ಬಯಸಿದರೆ ಕರ್ನಾಟಕ ವಿದ್ಯಾವರ್ಧಕ ಸಂಘವೂ ಹೋರಾಟದ ನೇತೃತ್ವ ವಹಿಸಲು ಸಿದ್ದ. ಬಗ್ಗೆ ಮಧ್ಯ ಕರ್ನಾಟಕದ ಜನತೆ, ಹೋರಾಟಗಾರರು ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ