ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದರಂತೆ ಮುಂದುವರಿಯೋಣ- ಪರಮೇಶ್ವರ್

geetha

ಭಾನುವಾರ, 3 ಮಾರ್ಚ್ 2024 (11:43 IST)
ಬೆಂಗಳೂರು-ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಅದ್ರಲ್ಲಿ ಏನಿದೆ ಎಂದು ಗೊತ್ತಿಲ್ಲ.ಶೀಲ್ಡ್ ಆಗಿ ಕೊಡ್ತಿದ್ದಾರೆ.ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದರಂತೆ ಮುಂದುವರಿಯೋಣ ಎಂದು ಸಿಎಂ ಹೇಳಿದ್ದಾರೆ.ಡೇಟಾ ಹೊರಗೆ ಬರುವವರೆಗೂ ಏನೂ ಹೇಳಲಾಗದು.ವರದಿ ಓಪನ್ ಮಾಡಿ, ಚರ್ಚೆ ಮಾಡಿ ನೋಡೋಣ ಎಂದು ಪರಮೇಶ್ವರ್ ಹೇಳಿದ್ದಾರೆ.
 
ಇನ್ನೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಸಂಬಂಧ FSL ವರದಿ ವಿಚಾರವಾಗಿ ಇನ್ನೂ ವರದಿ ಬರಬೇಕು.ಒಂದೇ ಒಂದು ಕ್ಲಿಪಿಂಗ್ ಅಲ್ಲ, ಸಾಕಷ್ಟು ಕ್ಲಿಪಿಂಗ್ ಇದಾವೆ .ವರದಿ ಇನ್ನೂ ಬಂದಿಲ್ಲ, ವರದಿ ಬಂದ ನಂತರ ಕ್ರಮ ತೆಗೆದುಕೊಳ್ತೇವೆ .ಈಗಾಗಲೇ 7 ಜನರನ್ನ ಕರೆಸಿ, ವಾಯ್ಸ್ ರೆಕಾರ್ಡಿಂಗ್ ಮಾಡಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ