ಯಡಿಯೂರಪ್ಪ ಅವರೇ ಪಂಚರ್ ಆಗ್ತಾರೋ ನೋಡೋಣ-ಡಿಕೆಶಿ

ಸೋಮವಾರ, 6 ಫೆಬ್ರವರಿ 2023 (21:22 IST)
ನಮ್ಮ ಪ್ರಜಾಧ್ವನಿ ಯಾತ್ರೆ ನೋಡಿ ಬಿಜೆಪಿ ಮತ್ತು ಜೆಡಿಎಸ್ ಗೆ ಹಿನ್ನಡೆ ಆಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಚಿತ್ರದುರ್ಗ ಕ್ಕೆ ಹೋಗುವ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು  ಪ್ರಜಾಧ್ವನಿ ಯಾತ್ರೆ ನೋಡಿ ಬಿಜೆಪಿ ಮತ್ತು ಜೆಡಿಎಸ್ ಗೆ ಹಿನ್ನಡೆ ಆಗುತ್ತಿದೆ. ಪ್ರಜಾಧ್ವನಿ ಯಾತ್ರೆಗೆ ಸೇರುತ್ತಿರುವ ಜನ ನೋಡಿದರೆ ಅದು ಸಾಬೀತಾಗುತ್ತಿದೆ. ಕಾಂಗ್ರೆಸ್ ನವರು ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡ್ತಾ ಬಂದಿದ್ದೇವೆ ಎಂದು ಹೇಳಿದರು. ಇನ್ನೂ ಪ್ರಜಾಧ್ವನಿ ಯಾತ್ರೆ ಬಸ್ ಪಂಚರ್ ಆಗ್ತಿದೆ ಎಂಬ ಮಾಜಿ ಸಿಎಂ  ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ ಪಂಚರ್ ಆಗಿದೆ ಅಂತ ಹೇಳಿದ್ದಕ್ಕೆ ಬೇಸರ ಇಲ್ಲ. ನಮ್ಮ ಟೈರ್ ಪಂಚರ್ ಆಗ್ತದೋ ಅಥವಾ ಅವರ ಟೈರ್ ಪಂಚರ್  ಆಗ್ತೋದೋ ಜನರು ತಿರ್ಮಾನ ಮಾಡ್ತಾರೆ ಅಥವಾ ಅವರೇ ಪಂಚರ್ ಆಗ್ತಾರೋ ನೋಡೋಣ ಎಂದು ವ್ಯಂಗ್ಯವಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ