ಭೀಮಾತೀರದ ಹಂತಕರಿಗೆ ಕಾಡುತ್ತಲೇ ಇದೆ ಜೀವಭಯ!

ಶನಿವಾರ, 4 ಮೇ 2019 (17:50 IST)
ಭೀಮಾತೀರದ ಚಡಚಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಲೂ ಆರೋಪಿಗಳು ಹಾಗೂ ಸಾಕ್ಷಿಗಳ ನಡುವೆ ಜೀವ ಭಯ ಹೋಗಿಲ್ಲ ಎನ್ನೋದು ಗೊತ್ತಾಗುತ್ತಿದೆ.

ಭೀಮಾತೀರದ ಹಂತಕ ಧರ್ಮರಾಜ ಚಡಚಣ ಸಹಚರರಿಗೆ ಜೀವ ಭಯ ಕಾಡುತ್ತಿದೆಯಂತೆ. ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು ಎಂದು ಸಚಿನ ಚವ್ಹಾಣ ಆಗ್ರಹ ಮಾಡಿದ್ದಾರೆ.

ಸಚಿನ ಚವ್ಹಾಣ, ಧರ್ಮರಾಜ ಡ್ರೈವರ್ ಆಗಿದ್ದವರು. ಹಂತಕ ಸಾಹುಕಾರನ ಸಹಚರ ಹಾಗೂ ಪ್ರಕರಣದ ಇನ್ನೋರ್ವ ಆರೋಪಿ ಭೀಮು ಪೂಜಾರಿಯಿಂದ ಜೀವ ಭಯ ತನಗೆ ಇದೆ ಎಂದು ಹೇಳಿಕೊಂಡಿದ್ದಾರೆ.

ಪ್ರಕರಣದ ಆರೋಪಿಗಳಿಗೆ ನೀಡಿದ ಬೇಲ್ ವಿರೋಧಿಸಿ ಸುಪ್ರೀಂಕೋರ್ಟ್ ಗೆ ಹೋಗ್ತೀವಿ. ಬೇಲ್ ಹೇಗೆ ಆಗಿದೆ ಅನ್ನೋದರ ಬಗ್ಗೆ ಸುಪ್ರೀಂ ಕೋರ್ಟನಲ್ಲಿ ಪ್ರಶ್ನಿಸಲಿದ್ದೇವೆ ಎಂದೂ ಹೇಳಿದ್ದಾರೆ. ಧರ್ಮರಾಜ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಐ ವಿಟ್ನೆಸ್ ಆಗಿರುವ ಸಚಿನ್ ಚವ್ಹಾಣ ಈ ಹೇಳಿಕೆ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ