ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ

ಸೋಮವಾರ, 17 ಸೆಪ್ಟಂಬರ್ 2018 (12:48 IST)
ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ ಸಮಾರಂಭ ನಡೆಯಿತು.
ದಾವಣಗೆರೆ ನಗರದ ರೋಟರಿ ಬಾಲಭವನದಲ್ಲಿ ಗ್ರಾಮ ಸೇವಾ ಸಂಘ, ಕರುಣಾ ಜೀವಾ ಕಲ್ಯಾಣ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೆಳನವನ್ನು ಚಿಂತಕ, ಸಾಹಿತಿ ರಾಜೇಂದ್ರ ಚಿನ್ನಿ, ಚಿಂತಕ ಸಂಜೀವ್ ಕುಲಕರ್ಣಿ, ಬಸವಪ್ರಭು. ರಂಗಕರ್ಮಿ ಪ್ರಸನ್ನ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಂತಕ ರಾಜೇಂದ್ರ ಚಿನ್ನಿ, ವಸುದೈವ ಅನ್ನೋದು ಕುಟುಂಬ, ಇಡೀ ಜಗತ್ತಿಗೆ ಇಷ್ಟೆಲ್ಲ ಜ್ಞಾನ ಬಂದರೂ, ನಾವೆಲ್ಲ ಒಂದೇ ಎಂಬ ತದ್ವಿರುದ್ದತೆಯ ಅನುಭವ ಕಾಣುತ್ತಿದೆ. ಕುಟುಂಬ ಅನ್ನುವ ಕಲ್ಪನೆ ಮರೆಯಾಗುತ್ತಿದೆ. ನಕಾಶೆಗಳ ಮೂಲಕ ಗಡಿರೇಖೆ ಹಾಕಿಕೊಳ್ಳುತ್ತಿದ್ದೇವೆ. ಅವರು ನಮ್ಮವರಲ್ಲ ಇವರು ನಮ್ಮವರಲ್ಲ ಎಂದು ಅವರನ್ನು ಸಾಯಿಸಿ ಬಿಡಬೇಕು ಅನ್ನುವ ಕಲ್ಪನೆ ಬೆಳೆದಿದೆ ಆತಂಕ ವ್ಯಕ್ತಪಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ